Webdunia - Bharat's app for daily news and videos

Install App

ರೈಲ್ವೆ ಹಳಿ ಬಳಿ ಶಾಲಾ ವ್ಯಾನ್ ಅಪಘಾತ: ಇಬ್ಬರು ಮಕ್ಕಳು ಸೇರಿ ಮೂವರು ಸಾವು, ಹಲವರಿಗೆ ಗಾಯ

Sampriya
ಮಂಗಳವಾರ, 8 ಜುಲೈ 2025 (14:34 IST)
Photo Credit X
ಕದ್ದಲೂರು: ತಮಿಳುನಾಡಿನ ಕಡಲೂರಿನಿಂದ ದಕ್ಷಿಣಕ್ಕೆ 10 ಕಿಲೋಮೀಟರ್ ದೂರದಲ್ಲಿರುವ ಸೆಮ್ಮಂಕುಪ್ಪಂನಲ್ಲಿ ಮಾನವಸಹಿತ ಲೆವೆಲ್ ಕ್ರಾಸಿಂಗ್ ದಾಟಲು ಯತ್ನಿಸುತ್ತಿದ್ದ ಶಾಲಾ ವ್ಯಾನ್‌ಗೆ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದಿದೆ.

ಈ ದುರ್ಘಟನೆಯಲ್ಲಿ ಇಬ್ಬರು ಮಕ್ಕಳು ಮತ್ತು ಒಬ್ಬರು ದಾರಿಹೋಕರು ಮೃತಪಟ್ಟಿದ್ದಾರೆ. ಮಂಗಳವಾರ ಬೆಳಗ್ಗೆ 7:45 ರ ಸುಮಾರಿಗೆ ಈ ಘಟನೆ ನಡೆದಿದೆ. ಮೃತ ಇಬ್ಬರು ಮಕ್ಕಳನ್ನು ತೊಂಡಮನಾಥಂನ ನಿವಾಸ್ (12ವ) ಮತ್ತು ಸುಬ್ರಮಣಿಯಪುರಂನ ಡಿ. ಚಾರುಮತಿ (16ವ) ಎಂದು ಗುರುತಿಸಲಾಗಿದೆ.

ಸುಮಾರು 10 ಮಂದಿ ಗಂಭೀರ ಗಾಯಗೊಂಡಿದ್ದು, ಅವರನ್ನು ಕಡಲೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಶಾಲಾ ವ್ಯಾನ್ ತೀವ್ರವಾಗಿ ನಜ್ಜುಗುಜ್ಜಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

ಅಪಘಾತದ ಸಮಯದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲಿದ್ದ ಸೆಮ್ಮಂಕುಪ್ಪಂನ ಅಣ್ಣಾದೊರೈ ಎಂಬ 55 ವರ್ಷದ ವ್ಯಕ್ತಿ ಕೂಡ ಮೃತಪಟ್ಟಿದ್ದಾರೆ.

ಕಡಲೂರು ಮತ್ತು ಅಲಪ್ಪಕ್ಕಂ ನಡುವಿನ ಇಂಟರ್‌ಲಾಕ್ ಇಲ್ಲದ ಸಿಬ್ಬಂದಿಯಿಂದ ಕೂಡಿದ ಗೇಟ್ ಆಗಿರುವ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 170 ರಲ್ಲಿ ಅಪಘಾತ ಸಂಭವಿಸಿದೆ. ವ್ಯಾನ್ ವಿಲ್ಲುಪುರಂ-ಮೈಲಾಡುತುರೈ ಪ್ಯಾಸೆಂಜರ್ ರೈಲು (ರೈಲು ಸಂಖ್ಯೆ 56813) ಗೆ ಡಿಕ್ಕಿ ಹೊಡೆದಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಮೆರಿಕಾದಲ್ಲಿ ಕಾರು ಅಪಘಾತದಲ್ಲಿ ಬಲಿಯಾದ ಹೈದರಾಬಾದ್ ಕುಟುಂಬ

ಅನ್ನರಾಮಯ್ಯ ಎಂದು ಕೊಚ್ಚಿಕೊಳ್ಳುವವರು ಬಾಕಿ ದುಡ್ಡು ಕೊಟ್ಟಿಲ್ಲ ಯಾಕೆ: ಬಿವೈ ವಿಜಯೇಂದ್ರ

ಕರ್ನಾಟಕಕ್ಕೆ ಯಾವಾಗ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ, ಇಲ್ಲಿದೆ ಉತ್ತರ

Arecanut price: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಮುಂದಿನ ಸುದ್ದಿ
Show comments