Webdunia - Bharat's app for daily news and videos

Install App

Saurabh Rajput murder: ಪೊಲೀಸರಿಗೆ ತಲೆನೋವಾದ ಸಾಹಿಲ್ ಶುಕ್ಲಾನ ರೂಂನ ಪೈಶಾಚಿಕ ಗೀಚುಬರಹಗಳು

Sampriya
ಸೋಮವಾರ, 24 ಮಾರ್ಚ್ 2025 (17:28 IST)
ಮೀರತ್:  ದೇಶವನ್ನೇ ಬೆಚ್ಚಿಬೀಳಿಸಿದ ನೌಕಾಪಡೆ ಅಧಿಕಾರಿ ಸೌರಭ್ ರಜಪೂತ್ ಭೀಕರ ಹತ್ಯೆ ಪ್ರಕರಣದಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರನ ಒಂದೊಂದೆ ಭಯಾನಕ ಕೃತ್ಯಗಳು ಬಯಲಿಗೆ ಬರುತ್ತಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಹತ್ಯೆ ಆರೋಪಿ ಸಾಹಿಲ್ ಶುಕ್ಲಾನ ರೂಂನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆ ವಿಡಿಯೋದಲ್ಲಿ ಕೊಠಡಿಯ ತುಂಬಾ ಪೇಟಿಂಗ್‌ ಬಿಡಿಸಲಾಗಿದೆ. ಅದರಲ್ಲಿ ನಿಗೂಢ ಬರಹಗಳನ್ನು ಕಾಣಬಹುದು. ಮನೆ ತುಂಬಾ ಸಿಗರೇಟ್‌, ಸ್ನಾಕ್ಸ್‌ ಪ್ಯಾಕೇಟ್ ಚೆಲ್ಲಿರುವುದನ್ನು ಕಾಣಬಹುದು.

ತನಿಖಾಧಿಕಾರಿಗಳ ಮಾಹಿತಿಯಂತೆ ಶುಕ್ಲಾ ಅವರ ಕೋಣೆಯಲ್ಲಿ ತಾಂತ್ರಿಕ ಚಿಹ್ನೆಗಳು, ಪೈಶಾಚಿಕ ಗೀಚುಬರಹ ಮತ್ತು ನಿಗೂಢ ಬರಹಗಳನ್ನು ಕಂಡುಹಿಡಿದಿದ್ದಾರೆ. ಇದು ಮಾಟಮಂತ್ರಕ್ಕೆ ಸಂಬಂಧಿಸಿದೆ ಎಂದು ಸೂಚಿಸುತ್ತದೆ.

ಹಿರಿಯ ಅಧಿಕಾರಿಯೊಬ್ಬರು, "ಇದು ನಿರ್ಲಕ್ಷ್ಯದ ಕೃತ್ಯವೇ ಅಥವಾ ಉದ್ದೇಶಪೂರ್ವಕ ದುಷ್ಕೃತ್ಯವೇ ಎಂದು ನಾವು ಪರಿಶೀಲಿಸುತ್ತಿದ್ದೇವೆ. ಅಪರಾಧದ ಸ್ವರೂಪವನ್ನು ಗಮನಿಸಿದರೆ, ಎಲ್ಲಾ ಸಂಭಾವ್ಯ ಪುರಾವೆಗಳನ್ನು ಸಂರಕ್ಷಿಸುವುದು ನಿರ್ಣಾಯಕವಾಗಿದೆ" ಎಂದು ಹೇಳಿದರು.

ಇನ್ನೂ ಸೌರಭ್ ಹತ್ಯೆ ಪ್ರಕರಣ ಸಂಬಂಧ ಆತನ ಪತ್ನಿ, ಆರೋಪಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.
<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments