Publish Date: Mon, 11 Dec 2023 (13:34 IST)
Updated Date: Mon, 11 Dec 2023 (14:33 IST)
ನವದೆಹಲಿ: ಪ್ರತಿಷ್ಠಿತ ಮೊಬೈಲ್ ನಿರ್ಮಾಣ ಕಂಪನಿ ಸ್ಯಾಮ್ ಸಂಗ್ ನ ಹೊಸ ಮಾದರಿಯ ಫೋನ್ ಒಂದು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ.
ಒಳ್ಳೆಯ ಫೀಚರ್ಸ್ ಬೇಕು, ನಮ್ಮ ಬಜೆಟ್ ಗೆ ತಕ್ಕದಾಗಿರಬೇಕು ಎಂದು ಯೋಚಿಸುವರಿಗೆ ಈ ಫೋನ್ ಸರಿ ಹೊಂದಬಹುದು. ಡಿಸೆಂಬ್ 19 ರಂದು ಸ್ಯಾಮ್ ಸಂಗ್ ಗ್ಯಾಲಕ್ಸಿ ಎ25 (Samsung Galaxy A25) ಶಿಪ್ಪಿಂಗ್ ಪ್ರಾರಂಭವಾಗಲಿದೆ.
ಮೂರು ಬಣ್ಣಗಳಲ್ಲಿ ಈ ಫೋನ್ ಮೂಡಿಬರಲಿದೆ. ಬ್ಯಾಟರಿ, ಕ್ಯಾಮರಾ ಸೇರಿದಂತೆ ಎಲ್ಲಾ ರೀತಿಯ ಫೀಚರ್ಸ್ ಅದ್ಭುತವಾಗಿರಲಿದೆ. ಭಾರತದಲ್ಲಿ ಇದರ ಬೆಲೆ ಸುಮಾರು 26,000 ಇರಬಹದು ಎಂದು ಅಂದಾಜಿಸಲಾಗಿದೆ.
ಇನ್ನೇನು ವರ್ಷಾಂತ್ಯವಾಗುತ್ತಿದ್ದು, ಸ್ಯಾಮ್ ಸಂಗ್ ಕಂಪನಿ ಒಂದಾದ ಮೇಲೊಂದರಂತೆ ಹೊಸ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುತ್ತಿದೆ. ಹೊಸ ವರ್ಷಕ್ಕೆ ಹೊಸ ಫೋನ್ ಖರೀದಿ ಮಾಡುವ ಯೋಜನೆಯಿದ್ದರೆ ಈ ಫೋನ್ ಅತ್ಯುತ್ತಮ ಆಯ್ಕೆಯಾಗಬಹುದು.