Select Your Language

Notifications

webdunia
webdunia
webdunia
webdunia

ಪತ್ನಿಯ ಲವ್ವರ್ ನಿಂದಲೇ ಹತ್ಯೆಗೀಡಾದ ಸಮಾಜವಾದಿ ಪಕ್ಷದ ನಾಯಕ

ಪತ್ನಿಯ ಲವ್ವರ್ ನಿಂದಲೇ ಹತ್ಯೆಗೀಡಾದ ಸಮಾಜವಾದಿ ಪಕ್ಷದ ನಾಯಕ
ನವದೆಹಲಿ , ಭಾನುವಾರ, 16 ಸೆಪ್ಟಂಬರ್ 2018 (08:39 IST)
ನವದೆಹಲಿ: ಸಮಾಜವಾದಿ ಪಕ್ಷದ ನಾಯಕ ಜಗದೀಶ್ ಮಾಲಿ (35) ಪತ್ನಿಯ ಪ್ರಿಯಕರನ ಗುಂಡಿನ ದಾಳಿಗೆ ಮೃತಪಟ್ಟಿರುವ ಘಟನೆ ನಡೆದಿದೆ.

ಈ ಸಂದರ್ಭದಲ್ಲಿ ಪತ್ನಿ ಕೂಡಾ ಪ್ರಿಯಕರನ ಜತೆಗೆ ಸೇರಿ ಕೃತ್ಯದಲ್ಲಿ ಪಾಲ್ಗೊಂಡಿದ್ದಾಳೆ ಎನ್ನಲಾಗಿದೆ. ಜಗದೀಶ್ ಮಾಲಿ ಮತ್ತು ಪತ್ನಿಯ ಪ್ರಿಯಕರ ದಿಲೀಪ್ ನಡುವೆ ಮಾರಾಮಾರಿ ನಡೆದಿದ್ದು, ಈ ಸಂದರ್ಭದಲ್ಲಿ ದಿಲೀಪ್, ಜಗದೀಶ್ ಮೇಲೆ ಗುಂಡು ಹಾರಿಸಿದ್ದ. ಈ ಸಂದರ್ಭದಲ್ಲಿ ಜಗದೀಶ್ ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದೀಗ ಜಗದೀಶ್ ಪತ್ನಿಯನ್ನು ಪೊಲೀಸರು ಬಂಧಿಸಿದ್ದು, ಪ್ರಿಯಕರನಿಗಾಗಿ ಹುಡುಕಾಟ ನಡೆಸಿದ್ದಾರೆ. ಕೃತ್ಯ ನಡೆಸಿದ ಬಳಿಕ ದಿಲೀಪ್ ಸ್ಥಳದಿಂದ ಪರಾರಿಯಾಗಿದ್ದ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ತಪ್ಪು ನಿಮ್ಮಲ್ಲೇ ಇಟ್ಕೊಂಡು ನಮ್ಮನ್ನು ಯಾಕೆ ದೂಷಿಸ್ತೀರಿ? ಬಿಜೆಪಿ ಪ್ರಶ್ನೆ