Select Your Language

Notifications

webdunia
webdunia
webdunia
webdunia

ಆ ಟೈಲರ್ ಎಷ್ಟು ಜನರನ್ನು ಕೊಂದಿದ್ದಾ ಗೊತ್ತಾ?

ಆ ಟೈಲರ್ ಎಷ್ಟು ಜನರನ್ನು ಕೊಂದಿದ್ದಾ ಗೊತ್ತಾ?
ನವದೆಹಲಿ , ಸೋಮವಾರ, 10 ಸೆಪ್ಟಂಬರ್ 2018 (17:34 IST)
ವೃತ್ತಿಯಲ್ಲಿ ಟೈಲರ್ ಆಗಿದ್ದ ಆ ವ್ಯಕ್ತಿ ಏಕಾಏಕಿಯಾಗಿ ಶ್ರೀಮಂತನಾಗಬೇಕೆಂದು ಸರಣಿ ಕೊಲೆಗಳನ್ನು ಮಾಡಿದ್ದಾನೆ. ಆತನ ಕೃತ್ಯ ಸ್ವತಃ ಪೊಲೀಸರಿಗೆ ಶಾಕ್ ನೀಡಿದೆ.

ಏಕಾಏಕಿಯಾಗಿ ಶ್ರೀಮಂತನಾಗಬೇಕೆಂದು ಆ ದರ್ಜಿ ಬರೋಬ್ಬರಿ 30 ಕೊಲೆಗಳನ್ನು ಮಾಡಿದ್ದಾನೆ. ಕಳೆದ ಏಳೆಂಟು ವರ್ಷಗಳಲ್ಲಿ 30 ಟ್ರಕ್ ಚಾಲಕರನ್ನು ಹಣಕ್ಕಾಗಿ ಸರಣಿ ಹತ್ಯೆಗಳನ್ನು ಮಾಡಿದ್ದು, ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಗುತ್ತಿಗೆ ಆಧಾರದ ಮೇಲೆ ಸರಣಿ ಕೊಲೆಗಳನ್ನು ಮಾಡಿದ್ದು ಇದುವರೆಗೆ ಸಾಕ್ಷ್ಯ ಸಿಗದಂತೆ ನೋಡಿಕೊಂಡಿದ್ದನು ಕೊಲೆ ಆರೋಪಿ ಆದೇಶ ಕಂಬಾರ.

ಪ್ರತಿಯೊಂದು ಕೊಲೆಗೆ ತಲಾ 50 ಸಾವಿರ ಹಣ ಪಡೆದುಕೊಳ್ಳುತ್ತಿದ್ದನು ಈ ಭೂಪ. ಪೊಲೀಸ್ ವಿಚಾರಣೆ ವೇಳೆ ಈ ಸಂಗತಿಯನ್ನು ಬಾಯಿ ಬಿಟ್ಟಿದ್ದಾನೆ. ಪೊಲೀಸರಿಗೆ ಸಿಕ್ಕಿ ಹಾಕಿಕೊಳ್ಳದಂತೆ ಐದಾರು ವರ್ಷಗಳಲ್ಲಿ 50 ಫೋನ್ ಹಾಗೂ 45 ಸಿಮ್ ಕಾರ್ಡಗಳನ್ನು ಬದಲಿದ್ದಾನೆ.

ಅಷ್ಟೇ ಅಲ್ಲ ಹತ್ತಕ್ಕೂ ಹೆಚ್ಚು ಅಂತರಾಜ್ಯ ಗ್ಯಾಂಗ್ ಗಳ ಜತೆ ಸಂಪರ್ಕ ಇಟ್ಟುಕೊಂಡು ಸರಣಿ ಕೊಲೆ ಮಾಡಿದ್ದಾನೆ.
ಆತನ ಸಹಚರರನ್ನೂ ಸಹ ಪೊಲೀಸರು ಭೋಪಾಲ್ ನಲ್ಲಿ ಬಂಧಿಸಿದ್ದಾರೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀಮಂತರ ಪರ ಮೋದಿ ಯೋಜನೆ: ರಾಹುಲ್ ಆರೋಪ