Select Your Language

Notifications

webdunia
webdunia
webdunia
webdunia

ಡಾಲರ್‌ ಎದುರು ಮತ್ತೆ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಕುಸಿದ ರೂಪಾಯಿ!

ಡಾಲರ್‌ ಎದುರು ಮತ್ತೆ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಕುಸಿದ ರೂಪಾಯಿ!
bengaluru , ಮಂಗಳವಾರ, 28 ಜೂನ್ 2022 (14:25 IST)

ಭಾರತದ ರೂಪಾಯಿ ಮೌಲ್ಯ ಡಾಲರ್‌ ಎದುರು ಮತ್ತೊಮ್ಮೆ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಕುಸಿತ ಕಂಡಿದೆ.

ಮಂಗಳವಾರ ಷೇರು ಮಾರುಕಟ್ಟೆ ಆರಂಭವಾದ ಕೆಲವೇ ನಿಮಿಷಗಳಲ್ಲಿ ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ 78.70ರೂ.ಗೆ ಕುಸಿತ ಕಂಡಿದೆ.

ಈ ಮೂಲಕ ಕಳೆದ ಒಂದು ತಿಂಗಳಲ್ಲಿ ರೂಪಾಯಿ ಮೌಲ್ಯ ಡಾಲರ್‌ ಎದುರು ಶೇ.1ರಷ್ಟು ಕುಸಿತ ಕಂಡಿದ್ದರೆ, ಕಳೆದ ಒಂದು ವರ್ಷದಲ್ಲಿ ಶೇ.6ರಷ್ಟು ಕುಸಿತ ಕಂಡಿದೆ.

ಭಾರತ ಇತ್ತೀಚಿನ ದಿನಗಳಲ್ಲಿ ರಫ್ತು ಕಡಿಮೆ ಮಾಡಿದ್ದು, ಆಮದು ಪ್ರಮಾಣ ಹೆಚ್ಚಳಕ್ಕೆ ಒತ್ತು ನೀಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಹಾರ ಧಾನ್ಯಗಳ ಕೊರತೆ ಉಂಟಾಗಿದ್ದರೆ ಮತ್ತೊಂದೆಡೆ ರಷ್ಯಾ ಮತ್ತು ಉಕ್ರೇನ್‌ ನಡುವಣ ಯುದ್ಧ ಸತತವಾಗಿ ನಡೆಯುತ್ತಿರುವುದು ಭಾರತಕ್ಕೆ ಮುಳುವಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಗಡಿಯಲ್ಲಿ ಡ್ರಗ್ಸ್ ವಶ !