Select Your Language

Notifications

webdunia
webdunia
webdunia
webdunia

ಗಡಿಯಲ್ಲಿ ಡ್ರಗ್ಸ್ ವಶ !

ಗಡಿಯಲ್ಲಿ ಡ್ರಗ್ಸ್ ವಶ !
ಜೈಪುರ , ಮಂಗಳವಾರ, 28 ಜೂನ್ 2022 (13:53 IST)
ಜೈಪುರ : ಸೋಮವಾರ ರಾಜಸ್ಥಾನದ ಶ್ರೀ ಗಂಗಾನಗರದಲ್ಲಿರುವ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯ ಬಳಿ ಗಡಿ ಭದ್ರತಾ ಪಡೆ(ಬಿಎಸ್ಎಫ್) ಎರಡು ಡ್ರಗ್ಸ್ ಪ್ಯಾಕೆಟ್ಗಳನ್ನು ವಶಪಡಿಸಿಕೊಂಡಿದೆ.

ಬಿಎಸ್ಎಫ್ ತಂಡಕ್ಕೆ ಶ್ರೀಕರಣಪುರ ಗಡಿಯಲ್ಲಿರುವ ಮುಕ್ಕನ್ ಗ್ರಾಮದಲ್ಲಿ ಡ್ರಗ್ಸ್ ಇದೆ ಎಂಬ ಮಾಹಿತಿ ಸಿಕ್ಕಿದೆ. ಈ ಜಾಲವನ್ನು ಹುಡುಕಿಕೊಂಡು ಹೋದ ಬಿಎಸ್ಎಫ್ ತಂಡಕ್ಕೆ ಮುಕ್ಕನ್ ಗ್ರಾಮದ ಜಮೀನಿನಲ್ಲಿ ಎರಡು ಡ್ರಗ್ಸ್ ಪ್ಯಾಕೆಟ್ಗಳು ಪತ್ತೆಯಾಗಿವೆ. 

ಪಾಕ್ ಸ್ಮಗ್ಲರ್ಗಳು ಈ ಡ್ರಗ್ಸ್ ಪ್ಯಾಕೆಟ್ಗಳನ್ನು ಕಳುಹಿಸಿದ್ದಾರೆ ಎಂದು ಬಿಎಸ್ಎಫ್ಗೆ ಮಾಹಿತಿ ಸಿಕ್ಕಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಉಕ್ರೇನ್‍ ಮೇಲೆ ಕ್ಷಿಪಣಿ ದಾಳಿ!