Select Your Language

Notifications

webdunia
webdunia
webdunia
webdunia

ಅಗ್ನಿಪಥ್‌ಗೆ ಭರ್ಜರಿ ಪ್ರತಿಕ್ರಿಯೆ

ಅಗ್ನಿಪಥ್‌ಗೆ ಭರ್ಜರಿ ಪ್ರತಿಕ್ರಿಯೆ
ನವದೆಹಲಿ , ಮಂಗಳವಾರ, 28 ಜೂನ್ 2022 (07:21 IST)
ನವದೆಹಲಿ : ಭಾರತೀಯ ವಾಯುಪಡೆ(ಐಎಎಫ್) ಅಗ್ನಿಪಥ್ ನೇಮಕಾತಿ ಯೋಜನೆಯಡಿ ಶುಕ್ರವಾರ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿತ್ತು.

ಕೇವಲ 4 ದಿನಗಳಲ್ಲಿ 94,000 ಅಗ್ನಿವೀರ್ ಆಕಾಂಕ್ಷಿಗಳು ಇದಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಜೂನ್ 14ರಂದು ಅಗ್ನಿಪಥ್ ಯೋಜನೆಯನ್ನು ಕೇಂದ್ರ ಅನಾವರಣಗೊಳಿಸಿದ ಬಳಿಕ ದೇಶಾದ್ಯಂತ ಅದರ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ನಡೆಯಿತು.

ವಿರೋಧ ಪಕ್ಷಗಳು ಯೋನೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದವು. ಇಲ್ಲಿಯವರೆಗೆ ಒಟ್ಟು 94,281 ಅಗ್ನಿವೀರ್ ವಾಯುಪಡೆ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಜುಲೈ 5ಕ್ಕೆ ನೋಂದಣಿ ಪ್ರಕ್ರಿಯೆ ಮುಕ್ತಾಯವಾಗುತ್ತದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಭರತ್ ಭೂಷಣ್ ಬಾಬು ತಿಳಿಸಿದ್ದಾರೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ಕಾಶಿ ಯಾತ್ರೆಗೆ ಮಾರ್ಗಸೂಚಿ ಪ್ರಕಟ