Select Your Language

Notifications

webdunia
webdunia
webdunia
webdunia

ಪ್ರವಾಹ ಪೀಡಿತ ಅಸ್ಸಾಂ- ಜನರನ್ನ ರಕ್ಷಿಸಿದ ಭಾರತೀಯ ವಾಯುಪಡೆ .

ಪ್ರವಾಹ ಪೀಡಿತ ಅಸ್ಸಾಂ- ಜನರನ್ನ ರಕ್ಷಿಸಿದ ಭಾರತೀಯ ವಾಯುಪಡೆ .
ಡಿಸ್ಪುರ್ , ಭಾನುವಾರ, 26 ಜೂನ್ 2022 (13:22 IST)
ಡಿಸ್ಪುರ್ : ಪ್ರವಾಹ ಪೀಡಿತ ಅಸ್ಸಾಂ, ಮೇಘಾಲಯದ ಜನರನ್ನು ರಕ್ಷಿಸಲು ಭಾರತೀಯ ವಾಯುಪಡೆ ಮುಂದಾಗಿದೆ. ಇಲ್ಲಿವರೆಗೂ ಐಎಎಫ್ 253ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದು, ಶೋಧ ಕಾರ್ಯವನ್ನು ಮುಂದುವರಿಸಿದೆ.
 
ಅಸ್ಸಾಂ ಮತ್ತು ಮೇಘಾಲಯದ ಜನರು ಪ್ರವಾಹದಿಂದ ತತ್ತರಿಸಿ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆಯು ಜೂನ್ 21 ರಿಂದ ಅಸ್ಸಾಂ ಮತ್ತು ಮೇಘಾಲಯದಲ್ಲಿ ಪ್ರವಾಹದಿಂದ ಜನರನ್ನು ಮತ್ತು ಜಾನುವಾರುಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದೆ. ಅಂದಿನಿಂದ, ಇಲ್ಲಿವರೆಗೂ ಐಎಎಫ್ ಸುಮಾರು 74 ಕಾರ್ಯಾಪಡೆಗಳನ್ನು ಕಳುಹಿಸಿದ್ದು, 253 ಜನರನ್ನು ರಕ್ಷಿಸಿದೆ.

ಕಳೆದ 4 ದಿನಗಳಿಂದ ಅಸ್ಸಾಂ ಮತ್ತು ಮೇಘಾಲಯದ ಪ್ರವಾಹ ಪೀಡಿತ ಜನರಿಗೆ ಪರಿಹಾರವನ್ನು ಒದಗಿಸುವ ತನ್ನ ಪ್ರಯತ್ನಗಳನ್ನು ಮುಂದುವರಿಸುತ್ತಿದೆ. 200 ಟನ್ಗಳಿಗಿಂತ ಹೆಚ್ಚು ಆಹಾರ ಮತ್ತು ಚಿಕಿತ್ಸೆಯ ಸಾಮಾಗ್ರಿಗಳನ್ನು ಈ ಪಡೆ ಹೊಂದಿದೆ. ವಿವಿಧ ಹೆಲಿಕಾಪ್ಟರ್ ಮತ್ತು ಸಾರಿಗೆ ವಿಮಾನಗಳನ್ನು ಬಳಸಿಕೊಂಡು 253 ಜನರನ್ನು ರಕ್ಷಿಸಲಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ಐಎಎಫ್ ತಿಳಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಗರ್ಭಪಾತ ಹಕ್ಕನ್ನು ರದ್ದುಗೊಳಿಸಿದ ಅಮೆರಿಕ!