Select Your Language

Notifications

webdunia
webdunia
webdunia
webdunia

ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಕಾರು: ನಾಲ್ವರನ್ನು ರಕ್ಷಿಸಿದ ಗ್ರಾಮಸ್ಥರು

gadag rain resque ರಕ್ಷಣೆ ಗದಗ್‌ ಮಳೆ
bengaluru , ಶುಕ್ರವಾರ, 20 ಮೇ 2022 (14:16 IST)
ವ್ಯಾಪಕ ಮಳೆಯಿಂದಾಗಿ ಕಾರು ಸಮೇತ  ನಾಲ್ವರ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕುನ ನೆಲೋಗಲ್ ಗ್ರಾಮದ ಬಳಿ ನಡೆದಿದೆ.
ನಿರಂತರ ಮಳೆಯಿಂದಾಗಿ ನೆಲೋಗಲ್-ಬೆಳ್ಳಟ್ಟಿ ಮಧ್ಯದ ಹಳ್ಳ ಭರ್ತಿಯಾಗಿ ಹರಿಯುತ್ತಿದೆ.
ರಸ್ತೆ ದಾಟುವಾಗ ಹಳ್ಳದ ನೀರಿಗೆ ಸಿಲುಕಿ ಕಾರೊಂದು ಕೊಚ್ಚಿಹೋಗುತ್ತಿತ್ತು. ಕಾರು, ಲಕ್ಷ್ಮೇಶ್ವರದಿಂದ ಬೆಳ್ಳಟ್ಟಿಗೆ ಹೊರಟಿದ್ದ ವೇಳೆ ಘಟನೆ ನಡೆದಿದೆ.
ನೀರಿನ ರಭಸಕ್ಕೆ ಸಿಲುಕಿ ಹಳ್ಳದಲ್ಲಿ ಕೊಚ್ಚಿ ಹೊರಟಿದ್ದ ಕಾರು ಹಳ್ಳದಲ್ಲಿನ ತಡೆಗೋಡೆಗೆ ತಾಗಿಕೊಂಡು ನಿಂತಿತ್ತು. ಆಗ ಗ್ರಾಮಸ್ಥರ ಸಹಾಯದಿಂದ ಕಾರು  ನಲ್ಲಿದ್ದ ನಾಲ್ವರನ್ನು ರಕ್ಷಿಸಲಾಗಿದೆ.
ಚನ್ನವೀರಗೌಡ ಪಾಟೀಲ, ಡಾ. ಪ್ರಭು ಮನ್ಸೂರ, ಬಸನಗೌಡ ತೆಗ್ಗಿನಮನಿ, ವಿರೇಶ್ ಡಂಬಳ ಎಂಬುವವರನ್ನು ಗ್ರಾಮಸ್ಥರು ರಕ್ಷಿಸಿದ್ದು, ಗ್ರಾಮಸ್ಥರ ಈ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಿಎಸ್‌ಟಿ ನಿಯಮ ರಚನೆ ರೂಪಿಸಲು ಅಧಿಕಾರ : ಸುಪ್ರೀಂ