Select Your Language

Notifications

webdunia
webdunia
webdunia
webdunia

ಜಿಎಸ್‌ಟಿ ನಿಯಮ ರಚನೆ ರೂಪಿಸಲು ಅಧಿಕಾರ : ಸುಪ್ರೀಂ

ಜಿಎಸ್‌ಟಿ ನಿಯಮ ರಚನೆ ರೂಪಿಸಲು ಅಧಿಕಾರ : ಸುಪ್ರೀಂ
ನವದೆಹಲಿ , ಶುಕ್ರವಾರ, 20 ಮೇ 2022 (13:22 IST)
ನವದೆಹಲಿ : ಜಿಎಸ್ಟಿ ಮಂಡಳಿಯ ಶಿಫಾರಸುಗಳ ಪಾಲನೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಕಡ್ಡಾಯವಲ್ಲ.
 
ನಮ್ಮದು ಸಹಕಾರ ಒಕ್ಕೂಟ ವ್ಯವಸ್ಥೆಯಾದ ಕಾರಣ, ಮಂಡಳಿಯ ಶಿಫಾರಸುಗಳು ಕೇವಲ ಮೌಲ್ಯಯುತ ಸಲಹೆಗಳಾಗಿರುತ್ತವೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಜೊತೆಗೆ ಜಿಎಸ್ಟಿ ನಿಯಮ ರೂಪಿಸುವಲ್ಲಿ ಸಂಸತ್ ಮತ್ತು ರಾಜ್ಯ ವಿಧಾನಸಭೆಗಳು ಸಮಾನ ಅಧಿಕಾರ ಹೊಂದಿವೆ. ಜಿಎಸ್ಟಿ ಮಂಡಳಿಯು ಮಾಡುವ ಶಿಫಾರಸುಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒಳಗೊಂಡ ಮಾತುಕತೆಯ ಮೂಲಕ ಹೊರಬರುವ ಫಲ.

ಜಿಎಸ್ಟಿ ಮಂಡಳಿಯು ದೇಶದ ಪರೋಕ್ಷ ತೆರಿಗೆ ವ್ಯವಸ್ಥೆಗೆ ಸಂಬಂಧಿಸಿದ ಕೇವಲ ಒಂದು ಸಾಂವಿಧಾನಿಕ ಸಂಸ್ಥೆಯಲ್ಲ, ಬದಲಾಗಿ ಒಕ್ಕೂಟ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ಆಧಾರಸ್ತಂಭ ಎಂದು ಹೇಳಿದೆ.

ಸುಪ್ರೀಂಕೋರ್ಟ್ನ ಈ ಆದೇಶ, ಒಕ್ಕೂಟ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಮಹತ್ತದ್ದು ಎಂದು ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳು ಹರ್ಷ ವ್ಯಕ್ತಪಡಿಸಿದ್ದರೆ, ಆದೇಶವು ಹಾಲಿ ಜಾರಿಯಲ್ಲಿರುವ ಒಂದು ದೇಶ, ಒಂದು ತೆರಿಗೆ ಪದ್ಧತಿಯ ಜಾರಿಗೆ ಯಾವುದೇ ಅಡ್ಡಿಯಾಗದು.

ಮಂಡಳಿಯ ಆದೇಶವನ್ನು ಒಪ್ಪುವ ಅಥವಾ ತಿರಸ್ಕರಿಸುವ ಹಕ್ಕು ರಾಜ್ಯಗಳಿಗಿದೆ ಎಂಬ ಅಂಶವು ಹಾಲಿ ಕಾನೂನಿನಲ್ಲಿಯೇ ಸ್ಪಷ್ಟವಾಗಿದೆ. ಮೇಲಾಗಿ ಕಳೆದ 5 ವರ್ಷಗಳಲ್ಲಿ ಯಾರೂ ಈ ಅಧಿಕಾರವನ್ನು ಬಳಸಿಕೊಂಡಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಮಗಾರಿಗಿಂತ ಗೌರವ ಉಳಿಸಿಕೊಳ್ಳಬೇಕು : ಡಿಕೆಶಿ