Select Your Language

Notifications

webdunia
webdunia
webdunia
webdunia

ವಸ್ತುಗಳ ಜಿಎಸ್‌ಟಿ ದರ ಏರಿಕೆ!

ವಸ್ತುಗಳ ಜಿಎಸ್‌ಟಿ ದರ ಏರಿಕೆ!
ನವ ದೆಹಲಿ , ಮಂಗಳವಾರ, 26 ಏಪ್ರಿಲ್ 2022 (19:22 IST)
ನವದೆಹಲಿ : ಈಗಾಗಲೇ ಬೆಲೆ ಏರಿಕೆಯ ಹೊಡೆತ ಅನುಭವಿಸುತ್ತಿರುವ ದೇಶದ ಜನತೆಗೆ, ಸರ್ಕಾರ ಮತ್ತೆ ಭಾರೀ ಪ್ರಮಾಣದ ತೆರಿಗೆ ದರ ಏರಿಕೆ ಶಾಕ್ ನೀಡಲು ಸಜ್ಜಾಗಿದೆ.

ಹಾಲಿ ಇರುವ ಶೇ.5, 12,18 ಮತ್ತು ಶೇ.28ರ ಸ್ತರ ಬದಲಾಯಿಸಲು ನಿರ್ಧರಿಸಿರುವ ಸರ್ಕಾರ, ಅದರ ಜೊತೆಜೊತೆಗೆ ಸುಮಾರು 143 ವಸ್ತುಗಳನ್ನು ಹೊಸ ತೆರಿಗೆ ಸ್ತರಕ್ಕೆ ವರ್ಗಾಯಿಸುವ ಪ್ರಸ್ತಾಪವನ್ನು ರಾಜ್ಯಗಳ ಮುಂದಿಟ್ಟಿದೆ.

ಒಂದು ವೇಳೆ ಕೇಂದ್ರೀಯ ಜಿಎಸ್ಟಿ ಮಂಡಳಿಯ ಪ್ರಸ್ತಾಪವನ್ನು ರಾಜ್ಯಗಳು ಒಪ್ಪಿಕೊಂಡರೆ, ಶೀಘ್ರವೇ 143 ವಸ್ತುಗಳ ದರ ಮತ್ತಷ್ಟುಏರಿಕೆಯಾಗಲಿದೆ. ಜೊತೆಗೆ ಇದುವರೆಗೂ ತೆರಿಗೆ ವ್ಯಾಪ್ತಿಗೆ ಒಳಪಡದ ಬೆಲ್ಲ, ಹಪ್ಪಳದಂಥ ವಸ್ತುಗಳು ಕೂಡಾ ಇನ್ನು ತೆರಿಗೆ ವ್ಯಾಪ್ತಿಗೆ ಸೇರಲಿವೆ.

ಜಿಎಸ್ಟಿ ವ್ಯವಸ್ಥೆ ಜಾರಿಯಾದ ಬಳಿಕ ರಾಜ್ಯಗಳು ಅನುಭವಿಸುತ್ತಿದ್ದ ನಷ್ಟವನ್ನು 5 ವರ್ಷಗಳ ಕಾಲ ಭರಿಸಲು ಸರ್ಕಾರ ಒಪ್ಪಿತ್ತು. ಆದರೆ ಈ ಪದ್ಧತಿ ಮುಂದಿನ ಜೂನ್ನಿಂದ ಸ್ಥಗಿತವಾಗಲಿದೆ.

ಹೀಗಾಗಿ ರಾಜ್ಯಗಳ ನಷ್ಟಭರಿಸಿಕೊಡಲು, ತೆರಿಗೆ ವ್ಯಾಪ್ತಿಗೆ ಒಂದಷ್ಟುಹೊಸ ವಸ್ತುಗಳನ್ನು ತರುವ ಮತ್ತು ಕೆಲವೊಂದಿಷ್ಟುವಸ್ತುಗಳನ್ನು ಹೆಚ್ಚಿನ ತೆರಿಗೆ ಸ್ತರಕ್ಕೆ ಬದಲಾಯಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪರಿಶೀಲನೆ ನಡೆಸಿ ಸರ್ಕಾರಕ್ಕೆ ಶೀಘ್ರವಾಗಿ ವರದಿ ನೀಡಬೇಕು : ಬಿ.ಸಿ.ಪಾಟೀಲ್