Publish Date: Sat, 03 Sep 2022 (17:26 IST)
Updated Date: Sat, 03 Sep 2022 (17:30 IST)
ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಮೋಟಾರು ವೆಹಿಕಲ್ ಇನ್ಸ್ಪೆಕ್ಟರ್ ಒಬ್ಬರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ
ಕುಂದಾರಾ ಮೂಲದ ವಿನೋದ್, ಪಠಾಣಪುರಂನ ಆರ್ಟಿಒ ಕಚೇರಿಯ ಕೆಲಸ ನಿರ್ವಹಿಸುತ್ತಿದ್ದರು. ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬಳಿಕ ಒಂದು ವಾರಗಳ ಕಾಲ ತಲೆಮರೆಸಿಕೊಂಡಿದ್ದ ವಿನೋದ್, ಇದೀಗ ಪುನಲೂರ್ ಡಿವೈಎಸ್ಪಿ ಮುಂದೆ ಶರಣಾಗಿದ್ದಾರೆ.
ಜುಲೈ 19ರಂದು ನಡೆಯಿತು. ಡ್ರೈವಿಂಗ್ ಟೆಸ್ಟ್ ಸಮಯದಲ್ಲಿ ನಿರ್ಜನ ಪ್ರದೇಶದಲ್ಲಿ ಕಾರಿನ ಒಳಗಡೆಯೇ ಮಹಿಳೆಯ ಮೇಲೆ ವಿನೋದ್ ಅನುಚಿತವಾಗಿ ವರ್ತಿಸಿದ್ದರು. ಘಟನೆ ಸಂಬಂಧ ಪಠಾಣಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಘಟನೆ ಬೆನ್ನಲ್ಲೇ ವಿನೋದ್ರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.