Publish Date: Sat, 02 Apr 2022 (13:40 IST)
Updated Date: Sat, 02 Apr 2022 (13:37 IST)
ಚಂಡೀಗಢ : ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿನ ಹಕ್ಕುಗಳನ್ನು ದೋಚುತ್ತಿದ್ದಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಆರೋಪಿಸಿದ್ದಾರೆ.
ಚಂಡೀಗಢವನ್ನು ತಕ್ಷಣವೇ ಪಂಜಾಬ್ಗೆ ವರ್ಗಾಯಿಸುವ ನಿರ್ಣಯವನ್ನು ಅಂಗೀಕರಿಸಿದ ಒಂದು ದಿನದ ಬಳಿಕ ಅಧಿವೇಶನದಲ್ಲಿ ಮಾತನಾಡಿದ ಭಗವಂತ್ ಮಾನ್ ಅವರು,
ಭಾರತವನ್ನು ಮುಕ್ತಗೊಳಿಸಲು ಪಂಜಾಬ್ನ ಜನರು ಶೇಕಡಾ 80 ರಷ್ಟು ತ್ಯಾಗ ಮಾಡಿದ್ದಾರೆ. ಆದರೆ ಭಾರತದ ಪ್ರಧಾನಿ ಪಂಜಾಬ್ನ ಹಕ್ಕುಗಳನ್ನು ದೋಚುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ತಮ್ಮ ರಾಜ್ಯಗಳ ಹಕ್ಕುಗಳನ್ನು ರಕ್ಷಿಸಲು ದಕ್ಷಿಣದ ರಾಜ್ಯಗಳ ನಾಯಕರು ಪ್ರದರ್ಶಿಸಿದಂತೆಯೇ ಏಕತೆ ಮತ್ತು ಧನ್ಯತೆಯ ಮನೋಭಾವವನ್ನು ಪ್ರದರ್ಶಿಸಲು ರಾಜ್ಯದ ಎಲ್ಲಾ ಸಂಸದರು ಮತ್ತು ಶಾಸಕರು ಒಂದಾಗಬೇಕು ಎಂದು ಸಲಹೆ ನೀಡಿದ್ದಾರೆ.