Select Your Language

Notifications

webdunia
webdunia
webdunia
webdunia

ಆರ್‍‍.ಕೆ.ನಗರ ಉಪಚುನಾವಣೆ: ನಟ ವಿಶಾಲಕೃಷ್ಣ, ದೀಪಾ ಜಯಕುಮಾರ ನಾಮಪತ್ರ ತಿರಸ್ಕೃತ

ಜೆ.ಜಯಲಲಿತಾ
ಚೆನ್ನೈ , ಮಂಗಳವಾರ, 5 ಡಿಸೆಂಬರ್ 2017 (20:28 IST)
ತಮಿಳುನಾಡಿನ ಆರ್‌.ಕೆ. ನಗರ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅವರ ಸಂಬಂಧಿ ದೀಪಾ ಜಯಕುಮಾರ್‌ ಹಾಗೂ ನಟ ವಿಶಾಲಕೃಷ್ಣ ಅವರ ನಾಮಪತ್ರಗಳು ತಿರಸ್ಕೃತಗೊಂಡಿವೆ.

ದೀಪಾ ಜಯಕುಮಾರ್‌ ಹಾಗೂ ನಟ ವಿಶಾಲಕೃಷ್ಣ ಅವರ ನಾಮಪತ್ರಗಳು ತಿರಸ್ಕರಿಸಲಾಗಿದೆ. ನ್ಯಾಯಾಂಗ ಪ್ರಕ್ರಿಯೆ ನಡೆದಿದ್ದು, ಪೂರ್ಣ ವಿವರಗಳನ್ನು ನಂತರ ತಿಳಿಸಲಾಗುವುದು ಎಂದು ಚುನಾವಣಾ ಆಯೋಗದ ಹಿರಿಯ ಅಧಿಕಾರಿ ಹೇಳಿದ್ದಾರೆ ಎಂದು ವರದಿಯಾಗಿದೆ.

ತಾಂತ್ರಿಕ ಕಾರಣಕ್ಕೆ ನಾಮಪತ್ರಗಳು ತಿರಸ್ಕೃತವಾಗಿವೆ ಎಂದು ಪ್ರಶ್ನೆಯೊಂದಕ್ಕೆ ಅಧಿಕಾರಿ ಪ್ರತಿಕ್ರಿಯಿಸಿದ್ದಾರೆ.

ಈ ನಡುವೆ ನಾಮಪತ್ರಗಳು ತಿರಸ್ಕೃತಗೊಂಡಿರುವುದನ್ನು ಖಂಡಿಸಿ ಅಭಿಮಾನಿಗಳು ಚೆನ್ನೈನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಅವರನ್ನು ತೆರವುಗೊಳಿಸುವ ಕಾರ್ಯ ನಡೆಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಡಿಸೆಂಬರ್ 15ಕ್ಕೆ ಜೆಡಿಎಸ್‍‍ ಅಭ್ಯರ್ಥಿಗಳ ಮೊದಲ ಪಟ್ಟಿ-ಎಚ್‍.ಡಿ.ಕೆ