ನವದೆಹಲಿ : ಭಾರತದಲ್ಲಿ ಫೆಬ್ರವರಿ 28ರವರೆಗೆ ನಿಗದಿತ ವಾಣಿಜ್ಯ ಪ್ರಯಾಣಿಕ ವಿಮಾನಗಳ ಮೇಲಿನ ನಿಷೇಧವನ್ನು ವಿಸ್ತರಿಸುವುದಾಗಿ ನಾಗರಿಕ ವಿಮಾನಯಾನದ ಮಹಾನಿರ್ದೇಶಕರು ಘೋಷಿಸಿದ್ದಾರೆ.
ಆದರೆ, ಏರ್ ಬಬಲ್ ಒಪ್ಪಂದಗಳು ಮತ್ತು ಮಿಷನ್ ವಂದೇ ಭಾರತ್ ಅಡಿಯಲ್ಲಿ ಎಲ್ಲಾ ವಿಮಾನಗಳು ಕಾರ್ಯನಿರ್ವಹಿಸುವುದನ್ನು ಮುಂದುವರೆಸುತ್ತವೆ. ಕಾರ್ಗೋ ವಿಮಾನಗಳು ಸಹ ಹಿಂದಿನ ವ್ಯವಸ್ಥೆಯಂತೆ ಕಾರ್ಯ ನಿರ್ವಹಿಸುವುದನ್ನು ಮುಂದುವರಿಸುತ್ತವೆ.
ಇದಕ್ಕೂ ಮೊದಲು, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಡಿಸೆಂಬರ್ 1ರಂದು ಹೊಸ ಒಮಿಕ್ರಾನ್ ರೂಪಾಂತರ ಹೆಚ್ಚುತ್ತಿರುವ ಆತಂಕದ ನಡುವೆ ಸೇವೆಗಳನ್ನು ಮರುಪ್ರಾರಂಭಿಸುವುದಾಗಿ ಘೋಷಿಸಿದ ಒಂದು ವಾರದೊಳಗೆ ಡಿಸೆಂಬರ್ 15ರಿಂದ ನಿಗದಿತ ಅಂತಾರಾಷ್ಟ್ರೀಯ ವಿಮಾನಗಳನ್ನು ಪುನರ್ ಆರಭಿಸದಿರಲು ನಿರ್ಧರಿಸಿತು.
ಭಾರತ ದೇಶದಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಹೇರುವ ಎರಡು ದಿನಗಳ ಮೊದಲು 2020ರ ಮಾರ್ಚ್ 23ರಿಂದ ಭಾರತದಲ್ಲಿ ನಿಗದಿತ ಅಂತಾರಾಷ್ಟ್ರೀಯ ವಿಮಾನಯಾನಗಳನ್ನು ಸ್ಥಗಿತಗೊಳಿಸಲಾಗಿದೆ. ಏರ್ ಬಬಲ್ ಒಪ್ಪಂದಗಳ ಅಡಿಯಲ್ಲಿ ತುರ್ತು ಅಂತರಾಷ್ಟ್ರೀಯ ಪ್ರಯಾಣಕ್ಕೆ ಮಾತ್ರ ಅನುಮತಿ ನೀಡಲಾಗಿತ್ತು.
ಭಾರತವು ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಹ್ರೇನ್, ಬಾಂಗ್ಲಾದೇಶ, ಭೂತಾನ್, ಕೆನಡಾ, ಇಥಿಯೋಪಿಯಾ, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಇರಾಕ್, ಜಪಾನ್, ಖಜಕಿಸ್ತಾನ್, ಕೀನ್ಯಾ, ಕುವೈತ್, ಮಾಲ್ಡೀವ್ಸ್, ಮಾರಿಷಸ್, ನೇಪಾಳ, ನೆದರ್ಲ್ಯಾಂಡ್ಸ್, ನೈಜೀರಿಯಾ, ಓಮನ್, ಕತಾರ್, ಜೊತೆಗೆ ವಾಯು ಸಾರಿಗೆ ಗುಳ್ಳೆಗಳನ್ನು ಹೊಂದಿದೆ.
ರಷ್ಯಾ, ರುವಾಂಡಾ, ಸೌದಿ ಅರೇಬಿಯಾ, ಸೀಶೆಲ್ಸ್, ಸಿಂಗಾಪುರ್, ಶ್ರೀಲಂಕಾ, ಸ್ವಿಟ್ಜರ್ಲೆಂಡ್, ತಾಂಜಾನಿಯಾ, ಉಕ್ರೇನ್, ಯುನೈಟೆಡ್ ಅರಬ್ ಎಮಿರೇಟ್ಸ್, ಯುನೈಟೆಡ್ ಕಿಂಗ್‌ಡಮ್, ಅಮೆರಿಕ ಮತ್ತು ಉಜ್ಬೇಕಿಸ್ತಾನ್ ಒಪ್ಪಂದಗಳು ಕೆಲವು ನಿಯಮಗಳು ಮತ್ತು ಷರತ್ತುಗಳ ಅಡಿಯಲ್ಲಿ ಎರಡೂ ಮಾರ್ಗದ ವಿಮಾನ ಪ್ರಯಾಣಕ್ಕೆ ಅನುಮತಿ ನೀಡಲಾಗುತ್ತದೆ.