Select Your Language

Notifications

webdunia
webdunia
webdunia
webdunia

ಭಾರತ-ದ.ಆಫ್ರಿಕಾ ನಡುವಿನ ಮೂರು ರೋಚಕ ಏಕದಿನ ಪಂದ್ಯಗಳು

ಭಾರತ-ದ.ಆಫ್ರಿಕಾ ನಡುವಿನ ಮೂರು ರೋಚಕ ಏಕದಿನ ಪಂದ್ಯಗಳು
ಮುಂಬೈ , ಮಂಗಳವಾರ, 18 ಜನವರಿ 2022 (08:40 IST)
ಮುಂಬೈ: ಭಾರತ ಮತ್ತು ದ.ಆಫ್ರಿಕಾ ನಡುವೆ ಟೆಸ್ಟ್ ಸರಣಿ ಮುಗಿದ ಬೆನ್ನಲ್ಲೇ ಏಕದಿನ ಸರಣಿ ಆರಂಭವಾಗುತ್ತಿದೆ. ಬುಧವಾರದಿಂದ ಉಭಯ ತಂಡಗಳ ನಡುವೆ ಏಕದಿನ ಸರಣಿ ಆರಂಭವಾಗಲಿದೆ. ಉಭಯ ದೇಶಗಳ ನಡುವೆ ನಡೆದ ಮೂರು ಸ್ಮರಣೀಯ ಪಂದ್ಯಗಳು ಯಾವುವು ನೋಡೋಣ.

1993 ಹೀರೋ ಕಪ್
ಕೋಲ್ಕೊತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಹೀರೋ ಕಪ್ ಫೈನಲ್ ಪಂದ್ಯದಲ್ಲಿ ಭಾರತ ಕೊನೆಯ ಓವರ್ ನಲ್ಲಿ 6 ರನ್ ರಕ್ಷಿಸಿಕೊಳ್ಳಬೇಕಾಗಿತ್ತು. ಈ ಹಂತದಲ್ಲಿ ಸಚಿನ್ ತೆಂಡುಲ್ಕರ್ ಬೌಲಿಂಗ್ ಗಿಳಿದು ಕೇವಲ ನಾಲ್ಕು ರನ್ ನೀಡಿ ತಂಡಕ್ಕೆ 2 ರನ್ ಗಳ ರೋಚಕ ಜಯ ತಂದುಕೊಟ್ಟಿದ್ದರು.

2002 ರ ಚಾಂಪಿಯನ್ ಟ್ರೋಫಿ ಫೈನಲ್
ಕೊಲೊಂಬೋದಲ್ಲಿ ನಡೆದ ಭಾರತ 261 ರನ್ ಗಳಿಸಿತ್ತು. ಈ ಮೊತ್ತವನ್ನು ಆಫ್ರಿಕಾ ಹರ್ಷಲ್ ಗಿಬ್ಸ್ ಬಿರುಗಾಳಿ ಆಟದಿಂದಾಗಿ ಸುಲಭವಾಗಿ ಬೆನ್ನತ್ತಲಿದೆ ಎಂಬುದೇ ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ 192 ರನ್ ಗಳಾಗಿದ್ದಾಗ ಗಿಬ್ಸ್ ಗಾಯಗೊಂಡು ಪೆವಲಿಯನ್ ಗೆ ಮರಳಿದರು. ಅದಾದ ಬಳಿಕ ನಡೆದಿದ್ದೇ ಬೇರೆ. ಸೆಹ್ವಾಗ್ ಈ ಪಂದ್ಯದಲ್ಲಿ 59 ರನ್ ಜೊತೆಗೆ ಮೂರು ವಿಕೆಟ್ ನ್ನೂ ಪಡೆದಿದ್ದರು. ಅಂತಿಮವಾಗಿ ಟೀಂ ಇಂಡಿಯಾ 10 ರನ್ ಗಳಿಂದ ಪಂದ್ಯ ಗೆದ್ದುಕೊಂಡಿತು.

2011 ರ ವಿಶ್ವಕಪ್ ಪಂದ್ಯ
ನಾಗ್ಪುರದಲ್ಲಿ ನಡೆದ ಈ ಪಂದ್ಯದಲ್ಲಿ ಸಚಿನ್ 111, ಸೆಹ್ವಾಗ್ 73, ಗಂಭೀರ್ 69 ರನ್ ಗಳಿಸಿದ್ದರು. ಒಂದು ಹಂತದಲ್ಲಿ ಭಾರತದ ಸ್ಕೋರ್ 2 ವಿಕೆಟ್ ನಷ್ಟಕ್ಕೆ 267 ರನ್ ಆಗಿತ್ತು. ಆದರೆ ನಾಟಕೀಯ ಕುಸಿತ ಕಂಡ ಟೀಂ ಇಂಡಿಯಾ ಬಳಿಕ 49 ನೇ ಓವರ್ ನಲ್ಲಿ 296 ರನ್ ಗಳಿಗೆ ಆಲೌಟ್ ಆಗಿತ್ತು. ಈ ಪಂದ್ಯವನ್ನು ಆಫ್ರಿಕಾ ಇನ್ನು ಎರಡು ಎಸೆತ ಬಾಕಿ ಇರುವಂತೇ 3 ವಿಕೆಟ್ ಗಳಿಂದ ಗೆದ್ದುಕೊಂಡಿತು.

Share this Story:

Follow Webdunia kannada

ಮುಂದಿನ ಸುದ್ದಿ

ಟೆಸ್ಟ್ ಕ್ಯಾಪ್ಟನ್ಸಿಗೆ ಟವೆಲ್ ಹಾಕಿದ್ರು ಜಸ್ಪ್ರೀತ್ ಬುಮ್ರಾ