Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಬಳಿಕ ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಯಾರು ಸಾರಥಿ?

ವಿರಾಟ್ ಕೊಹ್ಲಿ ಬಳಿಕ ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಯಾರು ಸಾರಥಿ?
ಮುಂಬೈ , ಸೋಮವಾರ, 17 ಜನವರಿ 2022 (09:20 IST)
ಮುಂಬೈ: ವಿರಾಟ್ ಕೊಹ್ಲಿ ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕತ್ವವನ್ನೂ ತ್ಯಜಿಸಿದ ಮೇಲೆ ಇದೀಗ ಹೊಸ ನಾಯಕ ಯಾರಾಗಬಹುದು ಎಂಬ ಚರ್ಚೆ ಆರಂಭವಾಗಿದೆ. ಸದ್ಯಕ್ಕೆ ಮೂವರ ಹೆಸರು ಚಾಲ್ತಿಯಲ್ಲಿದೆ.

ರೋಹಿತ್ ಶರ್ಮಾ:
ಈಗಾಗಲೇ ಸೀಮಿತ ಓವರ್ ಗಳ ಪಂದ್ಯಗಳಿಗೆ ರೋಹಿತ್ ಶರ್ಮಾರನ್ನು ಖಾಯಂ ನಾಯಕರಾಗಿ ಘೋಷಣೆ ಮಾಡಲಾಗಿದೆ. ಆದರೆ ರೋಹಿತ್ ಗೆ ಫಿಟ್ನೆಸ್ ದ್ದೇ ಸಮಸ್ಯೆ. ಅಲ್ಲದೆ, ಮೂರೂ ತಂಡಕ್ಕೆ ಅವರನ್ನೇ ನಾಯಕರಾಗಿರಿಸುವುದು ಬೇಡ ಎಂಬ ನಿರ್ಧಾರಕ್ಕೆ ಬಿಸಿಸಿಐ ಬಂದರೆ ಇನ್ನೊಬ್ಬ ನಾಯಕನ ಆಯ್ಕೆಯಾಗಬಹುದು. ಇಲ್ಲದೇ ಹೋದರೆ ರೋಹಿತ್ ಶರ್ಮಾಗೇ ಟೆಸ್ಟ್ ತಂಡದ ಹೊಣೆಯೂ ಸಿಗಬಹುದು.

ಕೆಎಲ್ ರಾಹುಲ್
ನಾಯಕತ್ವದಲ್ಲಿ ರಾಹುಲ್ ಗೆ ಅನುಭವ ಕಡಿಮೆ. ದ.ಆಫ್ರಿಕಾ ವಿರುದ್ಧ ಮೊದಲ ಬಾರಿಗೆ ಟೀಂ ಇಂಡಿಯಾ ನಾಯಕತ್ವ ವಹಿಸಿ ಸೋಲು ಅನುಭವಿಸಿದ್ದರು. ಇನ್ನೂ ನಾಯಕನಾಗುವ ಪರಿಪಕ್ವತೆ, ಅನುಭವ ಬಂದಿಲ್ಲ. ಹೀಗಿದ್ದರೂ ಯುವ ನಾಯಕನನ್ನು ತಯಾರು ಮಾಡುವ ಉದ್ದೇಶ ಬಿಸಿಸಿಐಗಿದ್ದರೆ ಅವರನ್ನೇ ನಾಯಕರಾಗಿ ನೇಮಿಸಬಹುದು.

ರಿಷಬ್ ಪಂತ್
ರಿಷಬ್ ಪಂತ್ ಗೆ ನಾಯಕತ್ವದ ಹೊಣೆ ನೀಡಬೇಕು ಎಂದು ಈಗಾಗಲೇ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ವಿಕೆಟ್ ಕೀಪರ್ ಆಗಿ ಬ್ಯಾಟಿಗರನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ರಿಷಬ್ ಗೆ ನಾಯಕತ್ವ ನೀಡುವುದರಿಂದ ಯುವ ಕ್ರಿಕೆಟಿಗನನ್ನು ತಯಾರು ಮಾಡಿದಂತಾಗುತ್ತದೆ. ಎಷ್ಟೋ ಸಂದರ್ಭದಲ್ಲಿ ಬ್ಯಾಟಿಂಗ್ ನಲ್ಲೂ ರಿಷಬ್ ತಂಡಕ್ಕೆ ಆಪತ್ಬಾಂಧವರಾಗಿದ್ದಾರೆ. ಹೀಗಾಗಿ ಅವರನ್ನೇ ನೇಮಿಸಿದರೂ ಅಚ್ಚರಿಯಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಟೆಸ್ಟ್ ಕ್ರಿಕೆಟ್ ನಲ್ಲಿ ಲೋ ಸ್ಕೋರಿಂಗ್ ಪಂದ್ಯಗಳೇ ಹೆಚ್ಚಾಗ್ತಿದೆ