Select Your Language

Notifications

webdunia
webdunia
webdunia
webdunia

ಭಾರತ-ದ.ಆಫ್ರಿಕಾ ಏಕದಿನ: ಕೆಎಲ್ ರಾಹುಲ್ ನಾಯಕತ್ವದಲ್ಲಿ ಗೆಲ್ಲುತ್ತಾ ಟೀಂ ಇಂಡಿಯಾ?

ಭಾರತ-ದ.ಆಫ್ರಿಕಾ ಏಕದಿನ: ಕೆಎಲ್ ರಾಹುಲ್ ನಾಯಕತ್ವದಲ್ಲಿ ಗೆಲ್ಲುತ್ತಾ ಟೀಂ ಇಂಡಿಯಾ?
ಪಾರ್ಲ್ , ಬುಧವಾರ, 19 ಜನವರಿ 2022 (08:40 IST)
ಪಾರ್ಲ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಟೆಸ್ಟ್ ಸರಣಿಯಲ್ಲಿ ಸೋಲು ಅನುಭವಿಸಿದ ಬಳಿಕ ಟೀಂ ಇಂಡಿಯಾ ಇಂದಿನಿಂದ ಏಕದಿನ ಪರೀಕ್ಷೆಗೆ ತಯಾರಾಗಿದೆ.

ನಾಯಕರಾಗಿ ವಿರಾಟ್ ಕೊಹ್ಲಿ ಯಗಾಂತ್ಯವಾದ ಬಳಿಕ ಹೊಸ ಸರಣಿ ಇದಾಗಿದೆ. ಕೆಎಲ್ ರಾಹುಲ್ ಗೆ ಇದು ಏಕದಿನಗಳಲ್ಲಿ ನಾಯಕರಾಗಿ ಇದು ಮೊದಲ ಅನುಭವ. ಈಗಾಗಲೇ ಐಪಿಎಲ್ ನಲ್ಲಿ ನಾಯಕತ್ವ ವಹಿಸಿ ಅಭ್ಯಾಸವಿರುವುದರಿಂದ ಸೀಮಿತ ಓವರ್ ಗಳಲ್ಲಿ ಟೀಂ ಇಂಡಿಯಾ ನಾಯಕರಾಗಿ ತಂಡವನ್ನು ಮುನ್ನಡೆಸುವ ವಿಶ್ವಾಸದಲ್ಲಿದ್ದಾರೆ.

ಇದಲ್ಲದೆ ಟೆಸ್ಟ್ ಸರಣಿ ಸೋಲಿನ ಹತಾಶೆಯಲ್ಲಿರುವ ಟೀಂ ಇಂಡಿಯಾಗೆ ಈಗ ಏಕದಿನ ಸರಣಿ ಗೆದ್ದು ಪ್ರತಿಷ್ಠೆ ಉಳಿಸಿಕೊಳ್ಳುವ ತವಕವಿದೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ಜೊತೆಗೆ ಆರಂಭಿಕರಾಗಿ ಶಿಖರ್ ಧವನ್ ಕಣಕ್ಕಿಳಿಯಬಹುದು. ಬೌಲಿಂಗ್ ನಲ್ಲಿ ಭುವನೇಶ್ವರ್ ಕುಮಾರ್ ತಂಡಕ್ಕೆ ವಾಪಸ್ ಆಗಲಿದ್ದಾರೆ. ಶ್ರೇಯಸ್ ಐಯರ್ ಗೆ ಮತ್ತೆ ಏಕದಿನ ಪಂದ್ಯಗಳಲ್ಲಿ ತಂಡಕ್ಕೆ ಕಮ್ ಬ್ಯಾಕ್ ಮಾಡಲು ಉತ್ತಮ ವೇದಿಕೆ ಸಿಗಲಿದೆ. ಟೆಸ್ಟ್ ತಂಡಕ್ಕೆ ಹೋಲಿಸಿದರೆ  ಟೀಂ ಇಂಡಿಯಾ ಏಕದಿನ ತಂಡ ಫಾರ್ಮ್ ನಲ್ಲಿದೆ ಎನ್ನಬಹುದು. ಹೀಗಾಗಿ ಉತ್ತಮ ಸ್ಪರ್ಧೆ ನಿರೀಕ್ಷಿಸಬಹುದು. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಮಧ‍್ಯಾಹ್ನ 2 ಗಂಟೆಗೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕನಾಗಲು ರೆಡಿ: ಕೆಎಲ್ ರಾಹುಲ್