Publish Date: Tue, 18 Jan 2022 (09:00 IST)
Updated Date: Tue, 18 Jan 2022 (09:10 IST)
ಮುಂಬೈ: ರೋಹಿತ್ ಶರ್ಮಾ ಟೀಂ ಇಂಡಿಯಾ ಟೆಸ್ಟ್ ತಂಡ ನಾಯಕರಾಗಿ ಆಯ್ಕೆಯಾಗುವ ಸಾಧ‍್ಯತೆಯಿದ್ದು, ಅವರಿಗೆ ಡೆಪ್ಯುಟಿಯಾಗಿ ಕೆಎಲ್ ರಾಹುಲ್ ಆಯ್ಕೆಯಾಗುವ ಸಾಧ‍್ಯತೆಯಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ವಿರಾಟ್ ಕೊಹ್ಲಿಯಿಂದ ತೆರವಾದ ಸ್ಥಾನಕ್ಕೆ ಹೊಸ ನಾಯಕ ಯಾರು ಎಂಬ ಪ್ರಶ್ನೆ ಎದುರಾಗಿದೆ. ರೋಹಿತ್ ಶರ್ಮಾ ಈಗಾಗಲೇ ಸೀಮಿತ ಓವರ್ ಗಳ ಪಂದ್ಯಕ್ಕೆ ಖಾಯಂ ನಾಯಕರಾಗಿದ್ದಾರೆ.
ಹೀಗಾಗಿ ಅವರಿಗೇ ಟೆಸ್ಟ್ ನಾಯಕತ್ವದ ಹೊಣೆಯೂ ನೀಡುವ ಸಾಧ‍್ಯತೆಯಿದೆ. ಇನ್ನು, ಕೆಎಲ್ ರಾಹುಲ್ ರನ್ನು ಭವಿಷ್ಯದ ನಾಯಕನಾಗಿಸುವ ನಿಟ್ಟಿನಲ್ಲಿ ಅವರನ್ನೇ ಉಪನಾಯಕನಾಗಿ ನೇಮಿಸುವ ಸಾಧ್ಯತೆಯಿದೆ.