Select Your Language

Notifications

webdunia
webdunia
webdunia
webdunia

ಕೊಹಿನೂರ್ ವಜ್ರ ಬ್ರಿಟನ್ನಿಂದ ವಾಪಸ್ ತರಿಸಿ ಎಂದು ರಾಷ್ಟ್ರಪತಿಗೆ ಮನವಿ

ಕೊಹಿನೂರ್ ವಜ್ರ ಬ್ರಿಟನ್ನಿಂದ ವಾಪಸ್ ತರಿಸಿ  ಎಂದು ರಾಷ್ಟ್ರಪತಿಗೆ ಮನವಿ
ಭುವನೇಶ್ವರ , ಮಂಗಳವಾರ, 13 ಸೆಪ್ಟಂಬರ್ 2022 (15:35 IST)
ಭುವನೇಶ್ವರ : ಕೊಹಿನೂರ್ ವಜ್ರವು ಜಗನ್ನಾಥ ದೇವರಿಗೆ ಸೇರಿದ್ದು, ಬ್ರಿಟನ್ನಿಂದ ಅದನ್ನು ಐತಿಹಾಸಿಕ ಪುರಿ ಜಗನ್ನಾಥ ದೇವಾಲಯಕ್ಕೆ  ವಾಪಸ್ ತರಲು,

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಧ್ಯಸ್ಥಿಕೆಯಲ್ಲಿ ಕ್ರಮವಹಿಸಬೇಕು ಎಂದು ಒಡಿಶಾದ ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆ ಮನವಿ ಮಾಡಿದೆ.

ರಾಣಿ ಎಲಿಜಬೆತ್-2 ನಿಧನ ನಂತರ, ಆಕೆಯ ಹಿರಿಯ ಪುತ್ರ ಪ್ರಿನ್ಸ್ ಚಾರ್ಲ್ಸ್  ಬ್ರಿಟನ್ ರಾಜನಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ನಿಯಮಗಳ ಪ್ರಕಾರ, 105 ಕ್ಯಾರೆಟ್ ವಜ್ರವಿರುವ ಕಿರೀಟವನ್ನು ಚಾರ್ಲ್ಸ್ ಪತ್ನಿ ಕಾರ್ನ್ವಾಲ್ ಕ್ಯಾಮಿಲ್ಲಾ ಅವರು ಧರಿಸಲಿದ್ದಾರೆ. 

12ನೇ ಶತಮಾನದ ದೇಗುಲಕ್ಕೆ ಕೊಹಿನೂರ್ ವಜ್ರವನ್ನು ಮರಳಿ ತರುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ಮಧ್ಯಸ್ಥಿಕೆ ವಹಿಸುವಂತೆ ಕೋರಿ ಪುರಿ ಮೂಲದ ಶ್ರೀ ಜಗನ್ನಾಥ ಸೇನೆಯು ರಾಷ್ಟ್ರಪತಿಗಳಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿತು.

ಕೊಹಿನೂರ್ ವಜ್ರವು ಶ್ರೀ ಜಗನ್ನಾಥ ಭಾಗ್ಬನ್ ಅವರದ್ದು. ಅದು ಈಗ ಇಂಗ್ಲೆಂಡ್ ರಾಣಿ ಬಳಿ ಇದೆ. ಮಹಾರಾಜ ರಂಜಿತ್ ಸಿಂಗ್ ಅವರು ತಮ್ಮ ಇಚ್ಛೆಯ ಮೇರೆಗೆ ಅದನ್ನು ಜಗನ್ನಾಥ ದೇವರಿಗೆ ದಾನ ಮಾಡಿದಂತೆ, ಅದನ್ನು ಭಾರತಕ್ಕೆ ತರಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರಧಾನಿಯವರಲ್ಲೂ ವಿನಂತಿಸುತ್ತೇವೆ ಎಂದು ಕೋರಿದೆ. 


Share this Story:

Follow Webdunia kannada

ಮುಂದಿನ ಸುದ್ದಿ

ಬೆಂಕಿ ಅವಘಡದಿಂದ ಸಾಕಷ್ಟು ಮಂದಿ ದುರ್ಮರಣ!