Select Your Language

Notifications

webdunia
webdunia
webdunia
webdunia

ವಿಶ್ವಸಂಸ್ಥೆ ಸೇರಿ ಜಾಗತಿಕ ಸಂಸ್ಥೆಗಳಲ್ಲಿ ಸುಧಾರಣೆ ಅಗತ್ಯ: ಸೀತಾರಾಮನ್

ವಿಶ್ವಸಂಸ್ಥೆ ಸೇರಿ ಜಾಗತಿಕ ಸಂಸ್ಥೆಗಳಲ್ಲಿ ಸುಧಾರಣೆ ಅಗತ್ಯ: ಸೀತಾರಾಮನ್
ನವದೆಹಲಿ , ಬುಧವಾರ, 13 ಅಕ್ಟೋಬರ್ 2021 (13:54 IST)
ನವದೆಹಲಿ : 'ವಿಶ್ವಸಂಸ್ಥೆ, ವಿಶ್ವ ಬ್ಯಾಂಕ್ ಹಾಗೂ ಅಂತರರಾಷ್ಟ್ರೀಯ ಹಣಕಾಸು ನಿಧಿಯಂತಹ (ಐಎಂಎಫ್) ಸಂಸ್ಥೆಗಳಲ್ಲಿ ತುರ್ತಾಗಿ ಸುಧಾರಣೆಗಳನ್ನು ತರುವುದು ಅಗತ್ಯ' ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಪಾದಿಸಿದರು.

ಹಾರ್ವರ್ಡ್ ಕೆನಡಿ ಸ್ಕೂಲ್ನಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ಹಲವು ದೇಶಗಳು ವ್ಯಾಪಾರ, ಭದ್ರತೆ, ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅನುದಾನ ಒದಗಿಸುವುದು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಈ ಜಾಗತಿಕ ಸಂಸ್ಥೆಗಳ ಮೊರೆ ಹೋಗಿವೆ. ಆದರೆ, ಈ ದೇಶಗಳ ಅಹವಾಲುಗಳಿಗೆ ಈ ವರೆಗೆ ಸ್ಪಂದನೆ ಸಿಕ್ಕಿಲ್ಲ' ಎಂದು ಹೇಳಿದರು.
'ಎಲ್ಲ ರಾಷ್ಟ್ರಗಳು ಸುಧಾರಣಾ ಕ್ರಮಗಳನ್ನು ಜಾರಿಗೊಳಿಸುತ್ತಿರುವಾಗ ಈ ಜಾಗತಿಕ ಸಂಸ್ಥೆಗಳ ಕಾರ್ಯವೈಖರಿ ಮಾತ್ರ ಹಲವಾರು ದಶಕಗಳಿಂದ ಸುಧಾರಣೆಯಾಗಿಲ್ಲ' ಎಂದು ಹೇಳಿದರು. 'ಎರಡಂಕಿ ಪ್ರಗತಿ ವಿಶ್ವಾಸ': 'ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಪ್ರಗತಿ ದರ ಎರಡಂಕಿ ಸಮೀಪಿಸುವ ವಿಶ್ವಾಸ ಇದೆ' ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಕೈ-ಕಮಲ ಟ್ವಿಟರ್ ವಾರ್!