ಬರೇಲಿ: ಪದೇ ಪದೇ ವಿವಾಹಿತ ವ್ಯಕಕ್ತಿಯಿಂದ ಅತ್ಯಾಚಾರಕ್ಕೆ ಒಳಗಾಗಿ, ಗರ್ಭಿಣಿಯಾಗಿದ್ದ ಬಾಲಕಿಯೊಬ್ಬಳು ಅಕಾಲಿಕ ಶಿಶುವಿಗೆ ಜನ್ಮ ನೀಡಿದ್ದು, ಮಗು ಸಾವನ್ನಪ್ಪಿದೆ.
ಈ ಘಟನೆ ಬರೇಲಿ ಜಿಲ್ಲೆಯ ನವಾಬ್‌ಗಂಜ್‌ನಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಎರಡು ಮಕ್ಕಳ ತಂದೆ ರಶೀದ್ (31) ಎಂದು ಗುರುತಿಸಲಾಗಿದೆ.
ಆರು ತಿಂಗಳ ಹಿಂದೆ ಅಪ್ರಾಪ್ತೆಯನ್ನು ತನ್ನ ಮನೆಗೆ ಹಣ್ಣು ನೀಡುವುದಾಗಿ ಕರೆದೊಯ್ದಿದ್ದಾನೆ. ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದನ್ನು ಆತ ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾನೆ. ಬಾಲಕಿಗೆ ಈ ವಿಚಾರವನ್ನು ಮನೆಯವರಲ್ಲಿ ಬಾಯ್ಬಿಟ್ಟಲ್ಲಿ ವಿಡಿಯೋವನ್ನು ತೋರಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಅದಲ್ಲದೆ ತನಗೆ ವಿರೋಧಿಸಿದ್ದಲ್ಲಿ ಆಕೆಯ ಕುಟುಂಬವನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಗುರುವಾರ ಬಾಲಕಿ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದಾಗ ವಿಚಾರ ಬೆಳಕಿಗೆ ಬಂದಿದೆ. ಮನೆಯವರು ಸರ್ಕಾರಿ ಆಸ್ಪತ್ರೆಯಲ್ಲಿ ಬಾಲಕಿಯನ್ನು ಪರೀಕ್ಷೆಗೆಂದು ಕೆರದುಕೊಂಡು ಹೋದಾಗ, ಅಲ್ಟ್ರಾಸೌಂಡ್ ವೇಳೆ ಆಕೆ ಏಳು ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ.
ಆಕೆಯನ್ನು ತಕ್ಷಣವೇ ಜಿಲ್ಲಾ ಮಹಿಳಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಅಲ್ಲಿ ಅವಳು ಅಕಾಲಿಕ ಮಗುವಿಗೆ ಜನ್ಮ ನೀಡಿದ್ದಳು, ಅದು ಹುಟ್ಟಿದ ಸ್ವಲ್ಪ ಸಮಯದ ನಂತರ ಸಾವನ್ನಪ್ಪಿತು.
ರಕ್ತಸ್ರಾವದಿಂದಾಗಿ ಬಾಲಕಿಯ ಸ್ಥಿತಿಯು ಆರಂಭದಲ್ಲಿ ಗಂಭೀರವಾಗಿದೆ ಆದರೆ ನಂತರ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಆಕೆಯ ಸ್ಥಿತಿ ಸುಧಾರಿಸುತ್ತಿದೆ ಎಂದು ಆಸ್ಪತ್ರೆಯ ಸಿಎಂಎಸ್ ಡಾ ತ್ರಿಭುವನ್ ಪ್ರಸಾದ್ ಖಚಿತಪಡಿಸಿದ್ದಾರೆ.
ಶುಕ್ರವಾರ ರಶೀದ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ನವಾಬ್‌ಗಂಜ್ ಠಾಣಾಧಿಕಾರಿ ಅರುಣ್ ಕುಮಾರ್ ಶ್ರೀವಾಸ್ತವ ತಿಳಿಸಿದ್ದಾರೆ. "ಆರೋಪಿಯನ್ನು ಬಂಧಿಸಲಾಗಿದೆ. ಶಿಶುವಿನ ಡಿಎನ್ಎ ಮಾದರಿಗಳನ್ನು ದೃಢೀಕರಣಕ್ಕಾಗಿ ಸಂರಕ್ಷಿಸಲಾಗಿದೆ," ಅವರು ಹೇಳಿದರು.
ಈ ಪ್ರಕರಣವು ಪ್ರದೇಶದಲ್ಲಿ ವ್ಯಾಪಕ ಕೋಪವನ್ನು ಉಂಟುಮಾಡಿದೆ, ಆರೋಪಿಗೆ ಕಠಿಣವಾದ ಶಿಕ್ಷೆ ನೀಡುವಂತೆ ಒತ್ತಾಯ ವ್ಯಕ್ತವಾಗಿದೆ.