ನವದೆಹಲಿ : ಯೋಗ ಗುರು ರಾಮದೇವ್ ಅವರು ಪೆಟ್ರೋಲ್ ಬೆಲೆ ಇಳಿಕೆ ಕುರಿತು ಈ ಹಿಂದೆ ನೀಡಿದ್ದ ಹೇಳಿಕೆ ಕುರಿತಂತೆ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಬಹಿರಂಗವಾಗಿ ಬೆದರಿಕೆಯೊಡ್ಡಿದ್ದಾರೆ.
ಹರಿಯಾಣದ ಕರ್ನಾಲ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪತ್ರಕರ್ತರೊಬ್ಬರು ಜನರು ಲೀಟರ್ಗೆ ಪೆಟ್ರೋಲ್ 40ರೂ. ಮತ್ತು ಸಿಲಿಂಡರ್ 300 ರೂ. ಬೆಲೆಯನ್ನು ನಿಗದಿಪಡಿಸುವ ಸರ್ಕಾರವನ್ನು ಪರಿಗಣಿಸಬೇಕು ಎಂದು ನೀವು ಈ ಹಿಂದೆ ಹೇಳಿದ್ರಿ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಯೋಗ ಗುರು ರಾಮದೇವ್ ಅವರು, ಹೌದು ನಾನು ಹೇಳಿದ್ದೆ, ಈಗ ನೀವು ಏನು ಮಾಡಬಹುದು? ಇಂತಹ ಪ್ರಶ್ನೆಗಳನ್ನು ಕೇಳುತ್ತಾ ಇರಬೇಡಿ. ನಿಮ್ಮ ಪ್ರಶ್ನಿಗಳಿಗೆಲ್ಲಾ ಉತ್ತರಿಸುತ್ತಾ ಇರಲು ನಾನು ಗುತ್ತಿಗೆದಾರನಲ್ಲ ಎಂದಿದ್ದಾರೆ.
ಮತ್ತೊಮ್ಮೆ ಇದೇ ಪ್ರಶ್ನೆಯನ್ನು ಕೇಳಿದಾಗ, ನಾನು ಹೇಳಿಕೆ ನೀಡಿದ್ದೇನೆ, ಅದಕ್ಕೆ ಈಗ ನೀವು ಏನು ಮಾಡುತ್ತೀರಾ? ಬಾಯಿ ಮುಚ್ಚು, ಸುಮ್ಮನೆ ನೀವು ಮತ್ತೆ, ಮತ್ತೆ ಇದೇ ಪ್ರಶ್ನೆ ಕೇಳುತ್ತಿದ್ದರೆ, ಅದು ಸರಿ ಇರುವುದುಲ್ಲ. ನೀನು ಸಭ್ಯ ತಂದೆ, ತಾಯಿಯ ಮಗನಾಗಿದ್ದರೆ, ಈ ರೀತಿ ಮಾತನಾಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.