Select Your Language

Notifications

webdunia
webdunia
webdunia
webdunia

ದಿನದಿಂದ ದಿನಕ್ಕೆ ಏರಿಕೆಯಾಗ್ತಿರುವ ಪೆಟ್ರೋಲ್ - ಡಿಸೇಲ್ ದರ

ದಿನದಿಂದ ದಿನಕ್ಕೆ ಏರಿಕೆಯಾಗ್ತಿರುವ ಪೆಟ್ರೋಲ್ - ಡಿಸೇಲ್ ದರ
bangalore , ಭಾನುವಾರ, 27 ಮಾರ್ಚ್ 2022 (19:35 IST)
ಕೇವಲ ಆರು ದಿನಗಳಲ್ಲಿ ಐದನೇ ಬಾರಿಗೆ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ ಏರಿಕೆಯಾಗಿದ್ದು, ಆಯಿಲ್​ ಕಂಪನಿಗಳು ಗ್ರಾಹಕರಿಗೆ ಬ್ಯಾಕ್​ ಟು ಬ್ಯಾಕ್​ ಶಾಕ್​ ನೀಡುತ್ತಿವೆ. ಇಂದು (ಮಾ.27) ಪೆಟ್ರೋಲ್ ಬೆಲೆಯಲ್ಲಿ 50​ ಮತ್ತು ಡೀಸೆಲ್​ ಬೆಲೆಯಲ್ಲಿ 55 ಪೈಸೆಯಷ್ಟು ಏರಿಕೆಯಾಗಿದೆ.
 
ಮಾರ್ಚ್​ 22 ರಿಂದ ಆರಂಭವಾದ ಇಂಧನ ದರ ಏರಿಕೆ ಬಿಸಿಗೆ ಮಾ. 24 ಒಂದು ದಿನ ಮಾತ್ರ ವಿರಾಮ ನೀಡಲಾಗಿತ್ತು. ಇದೀಗ ಪ್ರತಿದಿನ ಬೆಲೆ ಏರಿಕೆ ಮಾಡಲಾಗುತ್ತಿದೆ. ಇಂದು ಕೂಡ ಬೆಲೆ ಏರಿಕೆಯಾಗಿದೆ. ನಾಳೆಯು ಬೆಲೆ ಏರಿಕೆ ಆಗುವ ಸಾಧ್ಯತೆ ಇದೆ. ಒಂದೆಡೆ ಯೂಕ್ರೇನ್​-ರಷ್ಯಾ ಯುದ್ಧದಿಂದ ಖಾದ್ಯ ತೈಲ ಮತ್ತು ಗೋಧಿ ಸೇರಿದಂತೆ ಕೆಲವೊಂದು ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಇದೀಗ ಇಂಧನ ದರ ಮತ್ತೊಮ್ಮೆ ಏರಿಕೆಯಾಗಿರುವುದು ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ ಇನ್ನಷ್ಟು ತಟ್ಟಲಿದೆ. ಸಾಮಾನ್ಯ ಜನರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. ಕಳೆದ 6 ದಿನಗಳಲ್ಲಿ 3 ರೂಪಾಯಿ 70 ಪೈಸೆಯಷ್ಟು ಇಂಧನ ದರ ಏರಿಕೆಯಾಗಿದೆ.
 
ಇಂದು ಬೆಳಗ್ಗೆ 6 ಗಂಟೆಯಿಂದಲೇ ದರ ಏರಿಕೆ ಪರಿಷ್ಕರಣೆಯಾಗಿದ್ದು, ಇಂದಿನ ಇಂಧನ ದರ ಈ ಕೆಳಕಂಡಂತಿದೆ
 
ಬೆಂಗಳೂರು
ಪೆಟ್ರೋಲ್​: ಪ್ರತಿ ಲೀಟರ್​ಗೆ 104.43 ರೂಪಾಯಿ
ಡೀಸೆಲ್​: ಪ್ರತಿ ಲೀಟರ್​ಗೆ 84.69 ರೂಪಾಯಿ
 
ದೆಹಲಿ
ಪೆಟ್ರೋಲ್​: 99.11 ರೂಪಾಯಿ
ಡೀಸೆಲ್​: 90.42
 
ಮುಂಬೈ
ಪೆಟ್ರೋಲ್​: 113.88 ರೂ.
ಡೀಸೆಲ್​: 98.13
 
ಚೆನ್ನೈ
ಪೆಟ್ರೋಲ್​: 104.90 ರೂ.
ಡೀಸೆಲ್​: 95.00
 
ಕೊಲ್ಕತ
ಪೆಟ್ರೋಲ್​: 108.53 ರೂ.
ಡೀಸೆಲ್​: 93.57
 
ಹೈದರಾಬಾದ್​
ಪೆಟ್ರೋಲ್​: 112.06 ರೂ.
ಡೀಸೆಲ್​: 98.65
 
ಬರೋಬ್ಬರಿ 137 ದಿನಗಳವರೆಗೆ ತಟಸ್ಥವಾಗಿದ್ದ ಇಂಧನ ದರ ಇದೀಗ ಏರುಗತಿಯಲ್ಲಿದೆ. ಆರು ದಿನದಲ್ಲಿ ಐದನೇ ಬಾರಿ ಏರಿಕೆಯಾಗಿದೆ. ಪಂಚ ರಾಜ್ಯ ಚುನಾವಣೆ ಬೆನ್ನಲ್ಲೇ ಮತ್ತೆ ದರ ಏರಿಕೆ ಬಿಸಿ ಗ್ರಾಹಕರಿಗೆ ತಟ್ಟಿದೆ. ಭಾರತವು ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ಮತ್ತು ಗ್ರಾಹಕವಾಗಿದೆ. ಭಾರತ ತನ್ನ ತೈಲ ಅಗತ್ಯದ ಸುಮಾರು 85% ನಷ್ಟು ಭಾಗವನ್ನು ಸಾಗರೋತ್ತರ ಮಾರುಕಟ್ಟೆಗಳಿಂದ ತರಿಸಿಕೊಳ್ಳುತ್ತಿದೆ.
 
ಸ್ಥಳೀಯ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳು ಅಂತರಾಷ್ಟ್ರೀಯ ಬೆಲೆಗಳಿಗೆ ಸಂಬಂಧಿಸಿವೆ. ಇದು ಕಚ್ಚಾ ತೈಲ ಬೆಲೆಗಳ ಮೇಲೆ ನಿರ್ಧಾರವಾಗಿರುತ್ತದೆ. ರಷ್ಯಾ ಮತ್ತು ಉಕ್ರೇನ್​ ನಡುವೆ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಚ್ಛಾ ತೈಲದ ಬೆಲೆ ಏರಿಕೆಯಾಗಿದ್ದು, ಇದು ಜಾಗತಿಕ ತೈಲ ಬೆಲೆಗಳ ಮೇಲೆ ಗಣನೀಯ ಪ್ರಭಾವ ಬೀರಿದೆ. ಅಲ್ಲದೆ, ಯುಎಸ್​ ಡಾಲರ್​ ಎದುರು ರೂಪಾಯಿ ಮೌಲ್ಯ ಕುಸಿದಿರುವುದು ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ. 

ಬೆಂಗಳೂರು
ಪೆಟ್ರೋಲ್​: ಪ್ರತಿ ಲೀಟರ್​ಗೆ 104.43 ರೂಪಾಯಿ
ಡೀಸೆಲ್​: ಪ್ರತಿ ಲೀಟರ್​ಗೆ 84.69 ರೂಪಾಯಿ
 
ದೆಹಲಿ
ಪೆಟ್ರೋಲ್​: 99.11 ರೂಪಾಯಿ
ಡೀಸೆಲ್​: 90.42
 
ಮುಂಬೈ
ಪೆಟ್ರೋಲ್​: 113.88 ರೂ.
ಡೀಸೆಲ್​: 98.13
 
ಚೆನ್ನೈ
ಪೆಟ್ರೋಲ್​: 104.90 ರೂ.
ಡೀಸೆಲ್​: 95.00
 
ಕೊಲ್ಕತ
ಪೆಟ್ರೋಲ್​: 108.53 ರೂ.
ಡೀಸೆಲ್​: 93.57
 
ಹೈದರಾಬಾದ್​
ಪೆಟ್ರೋಲ್​: 112.06 ರೂ.
ಡೀಸೆಲ್​: 98.65
 
 

Share this Story:

Follow Webdunia kannada

ಮುಂದಿನ ಸುದ್ದಿ

ರಸ್ತೆ ದಾಟುವ ವೇಳೆ ಯುವತಿಗೆ ಕ್ಯಾಂಟರ್ ಡಿಕ್ಕಿ ಸಾವು ಪ್ರಕರಣ