ದೆಹಲಿ-ಕಲೆ ಅನ್ನೋದು ಯಾರ ಸ್ವತ್ತು ಕೂಡ ಅಲ್ಲ. ಈ ಕಲೆ ಅಷ್ಟು ಸುಲಭವಾಗಿ ಎಲ್ಲರಿಗೂ ಒಲಿಯೋದಿಲ್ಲ. ಒಲಿದರೆ ಅದು ಎಂತವರನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗುತ್ತದೆ. ಇದಕ್ಕೆ ಸೂಕ್ತ ಉದಾಹರಣೆ ಚಿತ್ರ ಕಲಾವಿದ ಶಿಂಟು ಮೌರ್ಯ. ಇವರೊಬ್ಬ ಅದ್ಭುತ ಕಲಾವಿದರಾಗಿದ್ದು, ಯಾವುದೇ ರೀತಿಯ ಪೈಂಟಿಗ್ ಬಳಸದೆ ಟೊಮೆಟೊ ಸಾಸ್, ಕೆಚಪ್ ಚಹಾ, ಶಾಂಪೂ ಇತ್ಯಾದಿಗಳನ್ನು ಬಳಸಿ ಅದ್ಭುತ ಚಿತ್ರಗಳನ್ನು ಬಿಡಿಸುತ್ತಾರೆ.
ಅಷ್ಟೇ ಯಾಕೆ ವಿವಿಧ ವಸ್ತುಗಳನ್ನು ಬಳಸಿಕೊಂಡು ನೆರಳು ಬೆಳಕಿನ ಕಲಾಕೃತಿಯನ್ನು ಸಹ ರಚಿಸುತ್ತಾರೆ. ಇವರು ತನ್ನ ಈ ವಿಶಿಷ್ಟ ಪ್ರತಿಭೆಯಿಂದ ಇದಾಗಲೇ ಭಾರಿ ಹೆಸರನ್ನು ಗಳಿಸಿದ್ದಾರೆ. ಇದೀಗ ಶಿಂಟು ಮೌರ್ಯ ಹಳೆಯ ಟಿವಿಯ ಬಿಡಿ ಭಾಗಗಳನ್ನು ಉಪಯೋಗಿಸಿಕೊಂಡು ನೆರಳು ಬೆಳಕಿನಲ್ಲಿ ರಾಮ ಮಂದಿರದ ಸುಂದರ ಕಲಾಕೃತಿಯನ್ನು ರಚಿಸಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇವರ ಅದ್ಭುತ ಕಲೆಗಾಗಿಕೆಗೆ ನೆಟ್ಟಿಗರು ತಲೆಬಾಗಿದ್ದಾರೆ.