Select Your Language

Notifications

webdunia
webdunia
webdunia
webdunia

ಶಾಸಕಿ ಪುತ್ರ ರಾಖಿ ಯಾದವ್ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ

rakhi yadav
ಗಯಾ , ಬುಧವಾರ, 6 ಸೆಪ್ಟಂಬರ್ 2017 (17:00 IST)
ಗಯಾ: ಆದಿತ್ಯಾ ಸಚ್ ದೇವಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಶಾಸಕಿಯ ಪುತ್ರ ರಾಖಿ ಯಾದವ್ ಸೇರಿದಂತೆ ಮೂವರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಅಪರಾಧಿಗಳಾದ ಜೆಡಿಯು ಎಂಎಲ್ ಸಿ ಆಗಿರುವ ಮನೋರಮಾ ದೇವಿ ಪುತ್ರ ರಾಖಿ ಯಾದವ್, ಸ್ನೇಹಿತ ಟೋನಿ ಯಾದವ್ ಮತ್ತು ಅಂಗರಕ್ಷಕ ರಾಜೇಶ್ ಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಸಾಕ್ಷ್ಯ ನಾಶ ಅಪರಾಧದಡಿ ರಾಖಿ ಯಾದವ್ ತಂದೆ ಬಿಂದಿ ಯಾದವ್ ಗೆ 5 ವರ್ಷ ಜೈಲು ಶಿಕ್ಷೆಯಾಗಿದೆ.

ಏನಿದು ಪ್ರಕರಣ?
ಬಿಹಾರದ ಗಯಾದಲ್ಲಿ 2016ರ ಮೇ 7ರಂದು ರಾಖಿ ಯಾದವ್ ಕಾರನ್ನು ಆದಿತ್ಯ ಸಚ್ ದೇವಾ ಹಾಗೂ ಗೆಳೆಯರಿದ್ದ ಕಾರು ರಾಖಿ ಕಾರನ್ನು ಓವರ್ ಟೇಕ್ ಮಾಡಿದ್ದರು. ಇದರಿಂದ ಸಿಟ್ಟಿಗೆದ್ದ ರಾಖಿ ಕಾರು ನಿಲ್ಲಿಸಿ, ಕೆಲಕಾಲ ಮಾತಿನ ಚಕಮಕಿ ನಡೆದಿತ್ತು. ಇದೇ ಸಂದರ್ಭದಲ್ಲಿ ಆದಿತ್ಯಾನನ್ನ ರಾಖಿ ಗುಂಡಿಟ್ಟು ಹತ್ಯೆ ಮಾಡಿದ್ದಾಗಿ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ನಂಬಲು ಅಸಾಧ್ಯ: ಏರ್‌ಟೆಲ್‌ನಿಂದ ಕೇವಲ 5 ರೂಪಾಯಿಗೆ 4ಜಿಬಿ ಡೇಟಾ