Select Your Language

Notifications

webdunia
webdunia
webdunia
webdunia

ನಂಬಲು ಅಸಾಧ್ಯ: ಏರ್‌ಟೆಲ್‌ನಿಂದ ಕೇವಲ 5 ರೂಪಾಯಿಗೆ 4ಜಿಬಿ ಡೇಟಾ

ನಂಬಲು ಅಸಾಧ್ಯ: ಏರ್‌ಟೆಲ್‌ನಿಂದ ಕೇವಲ 5 ರೂಪಾಯಿಗೆ 4ಜಿಬಿ ಡೇಟಾ
ನವದೆಹಲಿ , ಬುಧವಾರ, 6 ಸೆಪ್ಟಂಬರ್ 2017 (16:35 IST)
ರಿಲಯನ್ಸ್ ಜಿಯೋ ಮತ್ತು ಅದರ ಅಗ್ಗ ಆಫರ್‌ಗಳಿಂದಾಗಿ ಟೆಲಿಕಾಂ ಕ್ಷೇತ್ರವೇ ತಲ್ಲಣಿಸಿರುವಾಗ, ಇತರ ಟೆಲಿಕಾಂ ಕಂಪೆನಿಗಳು ತಾವೇನು ಕಮ್ಮಿಯಿಲ್ಲ ಎನ್ನುವಂತೆ ರಿಲಯನ್ಸ್ ಜಿಯೋಗೆ ಪ್ರಬಲ ಪೈಪೋಟಿ ನೀಡಲು ಮುಂದಾಗಿವೆ. 
ಟೆಲಿಕಾಂ ಕ್ಷೇತ್ರದಲ್ಲಿ ಮೊಬೈಲ್ ಡೇಟಾ ಸಮರಕ್ಕೆ ಮುನ್ನುಗ್ಗಿರುವ ಏರ್‌ಟೆಲ್ ಕಂಪೆನಿ, ಕೇವಲ 5 ರೂಪಾಯಿಗಳ ಆರಂಭಿಕ ದರದಲ್ಲಿ ಸರಣಿ ನೂತನ ಡೇಟಾ ಮತ್ತು ವೈಸ್ ಕಾಲ್ ಪ್ಲ್ಯಾನ್ಸ್‌ಗಳನ್ನು ಘೋಷಿಸಿದೆ.
 
ಏತನ್ಮದ್ಯೆ, ಏರ್‌ಟೆಲ್ ಆಫರ್‌ಗಳು ಪ್ರತಿಯೊಬ್ಬರಿಗೂ ಲಭ್ಯವಾಗುವುದಿಲ್ಲ. ನಿಮ್ಮ ಆಪರೇಟರ್‌ಗಳನ್ನು ಸಂಪರ್ಕಿಸಿ ನಿಮಗೆ ಹೊಸ ಆಫರ್‌ಗಳನ್ನು ಪಡೆಯುವ ಅರ್ಹತೆಯಿದೆಯೇ ಎನ್ನುವುದನ್ನು ಪರಿಶೀಲಿಸಿ ಎಂದು ಕಂಪೆನಿ ತಿಳಿಸಿದೆ.  
 
ಏರ್‌ಟೆಲ್ ಸಂಸ್ಥೆ ಗ್ರಾಹಕರಿಗೆ ಏಳು ದಿನಗಳ ಅವಧಿಗೆ ಮಾತ್ರ ಕೇವಲ 5 ರೂಪಾಯಿ ದರದ ಆಫರ್‌ನಲ್ಲಿ 4ಜಿಬಿ, 3ಜಿ/4ಜಿ ಡೇಟಾ ಆಫರ್ ನೀಡಲಿದೆ. ಅದು ಮೊದಲ ಬಾರಿ ರಿಚಾರ್ಜ್‌ಗೆ ಮಾತ್ರ ಅನ್ವಯವಾಗುತ್ತದೆ ಎಂದು ತಿಳಿಸಿದೆ.
 
ಆದ್ದರಿಂದ, ನೀವು 5 ರೂಪಾಯಿ ಪ್ಲ್ಯಾನ್‌ಗೆ ರಿಚಾರ್ಜ್ ಮಾಡಿದಲ್ಲಿ 4ಜಿಬಿ ಡೇಟಾವನ್ನು ಏಳು ದಿನಗಳೊಳಗೆ ಬಳಸಿಕೊಳ್ಳಬೇಕಾಗುತ್ತದೆ. ಏಳು ದಿನಗಳ ನಂತರ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ ಇತರರೊಂದಿಗೆ ಶೇರ್ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಕಂಪೆನಿ ತಿಳಿಸಿದೆ.
 
ಏರ್‌ಟೆಲ್ ಸಂಸ್ಥೆ  8,  15,  40, 349, ಮತ್ತು 399 ರೂಪಾಯಿಗಳ ಯೋಜನೆಗಳನ್ನು ಪ್ರಾರಂಭಿಸಿದೆ.  ಆದರೆ ಯೋಜನೆಗಳು ವಿಭಿನ್ನ ವಲಯಗಳಲ್ಲಿ ವಿಭಿನ್ನ ರೀಚಾರ್ಜ್ ಆಯ್ಕೆಗಳನ್ನು ಒದಗಿಸುತ್ತವೆ ಮತ್ತು ಸಂಖ್ಯೆಯಿಂದ ಸಂಖ್ಯೆಗೆ ಭಿನ್ನವಾಗಿರುತ್ತವೆ ಎಂದು ಏರ್‌ಟೆಲ್ ಸಂಸ್ಥೆ ತಿಳಿಸಿದೆ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಗೌರಿ ಲಂಕೇಶ್ ಹತ್ಯೆಯಿಂದ ಪತ್ರಿಕಾ ಸ್ವಾತಂತ್ರ್ಯಹರಣ: ರಿಚರ್ಡ್ ವೆರ್ಮಾ