Select Your Language

Notifications

webdunia
webdunia
webdunia
webdunia

Rajastan: ನಿದ್ರಾಜನಕ ಔಷಧಿ ನೀಡಿ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಮೇಲೆ ರೇಪ್‌

ರಾಜಸ್ಥಾನದ ಅತ್ಯಾಚಾರ ಪ್ರಕರಣ

Sampriya

ರಾಜಸ್ಥಾನ , ಭಾನುವಾರ, 8 ಜೂನ್ 2025 (13:24 IST)
ರಾಜಸ್ಥಾನ: ಆಸ್ಪತ್ರೆಯ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗೆ ನಿದ್ರಾಜನಕ ಔಷಧಿ ನೀಡಿ, ಆಸ್ಪತ್ರೆಯ ಸಿಬ್ಬಂದಿ ಅತ್ಯಾಚಾರ ಎಸಗಿದ ಘಟನೆ ರಾಜಸ್ಥಾನದಲ್ಲಿ ವರದಿಯಾಗಿದೆ. 

ಆರೋಪಿಯನ್ನು ಸುಭಾಷ್ ಗಠಲಾ ಎಂದು ಗುರುತಿಸಲಾಗಿದ್ದು, ಘಟನೆ ಬಳಿಕ ಆತನನ್ನು ಅಮನಂತರ ಆಸ್ಪತ್ರೆ ಆಡಳಿತವು ಆತನನ್ನು ಅಮಾನತುಗೊಳಿಸಿದೆ. 

ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಮೊದಲು ಸಂತ್ರಸ್ತೆಗೆ ನಿದ್ರಾಜನಕ ಇಂಜೆಕ್ಷನ್ ನೀಡಲಾಗಿದೆ. ಘಟನೆಯ ಸಮಯದಲ್ಲಿ, ಆಕೆಯ ಕುಟುಂಬ ಹೊರಗೆ ಕಾಯುತ್ತಿದ್ದಾಗ ಆಕೆಯ ಐಸಿಯು ಹಾಸಿಗೆಯ ಸುತ್ತಲೂ ಪರದೆಗಳನ್ನು ಎಳೆಯಲಾಗಿತ್ತು. ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆ ಕೂಗಲು ಆರಂಭಿಸಿದ್ದಾರೆ. ಅಲ್ಲಿಗೆ ಬಂದ ಪತಿಗೆ ಘಟನೆಯನ್ನು ವಿವರಿಸುವಲ್ಲಿ ಮಹಿಳೆ ಯತ್ನಿಸಿದ್ದಾರೆ. ಆದರೆ ನಿದ್ರಾಜನಕದ ಪರಿಣಾಮದಿಂದಾಗಿ ಅವರು ಸ್ಪಷ್ಟವಾಗಿ ಮಾತನಾಡಲು ಸಾಧ್ಯವಾಗಲಿಲ್ಲ.

ಸಹಾಯಕ ಸಬ್-ಇನ್ಸ್‌ಪೆಕ್ಟರ್ ಮಹಾವೀರ್ ಸಿಂಗ್ ಮಾತನಾಡಿ, ಜೂನ್ 4 ರ ರಾತ್ರಿ ಇಎಸ್‌ಐಸಿ ವೈದ್ಯಕೀಯ ಕಾಲೇಜಿನ ಐಸಿಯುಗೆ ದಾಖಲಾಗಿದ್ದ ತನ್ನ 32 ವರ್ಷದ ಪತ್ನಿಯ ಮೇಲೆ ನರ್ಸಿಂಗ್ ಸಿಬ್ಬಂದಿ ಅತ್ಯಾಚಾರ ನಡೆಸಿದ್ದಾರೆ ಎಂದು ವ್ಯಕ್ತಿಯೊಬ್ಬ ದೂರಿದ್ದಾನೆ. 


Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದ ಮರ್ಯಾದೆ ಹಾಳು ಮಾಡಿದ್ದೀರಿ: ಸಿದ್ಧರಾಮಯ್ಯ ಸರ್ಕಾರದ ವಿರುದ್ಧ ಸೋಮಣ್ಣ ವಾಗ್ದಾಳಿ