Select Your Language

Notifications

webdunia
webdunia
webdunia
webdunia

Stray Dog Attack: ದಾಳಿಯ ಭೀಕರತೆಗೆ ಉಳಿದಿದ್ದು ಮಗುವಿನ ಮುಖದ ಮೂಳೆಗಷ್ಟೇ

ಬೀದಿ ನಾಯಿ ದಾಳಿ

Sampriya

ಬಿಹಾರ , ಶನಿವಾರ, 7 ಜೂನ್ 2025 (19:44 IST)
Photo Courtesy X
ಬಿಹಾರದ ಸಮಷ್ಟಿಪುರ ಜಿಲ್ಲೆಯಲ್ಲಿ ಬೀದಿ ನಾಯಿಗಳ ಗುಂಪೊಂದು ನಡೆಸಿದ ಭೀಕರ ದಾಳಿಯಲ್ಲಿ 13 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.

ದಾಳಿ ಎಷ್ಟು ಭೀಕರವಾಗಿತ್ತೆಂದರೆ, ನಾಯಿಗಳು ಅವನ ಮುಖವನ್ನು ಕಚ್ಚಿ ಚರ್ಮವನ್ನು ಕಿತ್ತಿರುವುದರಿಂದ  ಅಸ್ಥಿಪಂಜರಗಳು ಗೋಚರಿಸುತ್ತಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕನ ತಂದೆ ಸಂತೋಷ್ ಪಾಸ್ವಾನ್ ಪೊಲೀಸರಿಗೆ ತಿಳಿಸಿದ್ದು, ಪೂಜಾ ಸ್ಥಳಕ್ಕೆ ನಡೆದುಕೊಂಡು ಹೋಗುತ್ತಿದ್ದ ಗ್ರಾಮಸ್ಥರ ಗುಂಪಿನೊಂದಿಗೆ ನಾವು ಇದ್ದೆವು. ಆ ಹುಡುಗ ತಮ್ಮ ಹಿಂದೆ ಸ್ವಲ್ಪ ದೂರ ನಡೆಯುತ್ತಿದ್ದ.

ಅವನನ್ನು ಒಬ್ಬಂಟಿಯಾಗಿ ನೋಡಿ, ಬೀದಿ ನಾಯಿಗಳು ಅವನ ಕಡೆಗೆ ಧಾವಿಸಿ ಬಂದು ಇದ್ದಕ್ಕಿದ್ದಂತೆ ಅವನ ಮೇಲೆ ದಾಳಿ ಮಾಡಿದವು ಎಂದು ಪೊಲೀಸರು ತಿಳಿಸಿದ್ದಾರೆ. ಜನರು ಬೀದಿ ನಾಯಿಗಳನ್ನು ಓಡಿಸುವಷ್ಟರಲ್ಲಿ ಬಾಲಕ ಸಾವನ್ನಪ್ಪಿದ್ದಾನೆ ಎಂದು ಅವರು ಹೇಳಿದರು.

ಕೋಪಗೊಂಡ ಗ್ರಾಮಸ್ಥರು ಗ್ರಾಮದ ಮುಖ್ಯ ರಸ್ತೆಯನ್ನು ತಡೆದು ಪೊಲೀಸರು ತಡವಾಗಿ ಬಂದಿದ್ದಾರೆ ಎಂದು ಆರೋಪಿಸಿದರು. ಅವರು ಘೋಷಣೆಗಳನ್ನು ಕೂಗಿದರು ಮತ್ತು ಮಗುವಿನ ಕುಟುಂಬಕ್ಕೆ ಪರಿಹಾರವನ್ನು ಒತ್ತಾಯಿಸಿದರು.

ಒಂದು ತಿಂಗಳ ಹಿಂದೆ, ಅದೇ ಪ್ರದೇಶದಲ್ಲಿ 15-20 ಬೀದಿ ನಾಯಿಗಳು ನಡೆಸಿದ ದಾಳಿಯಲ್ಲಿ ಬಾಲಕಿಯೊಬ್ಬಳು ತೀವ್ರವಾಗಿ ಗಾಯಗೊಂಡಿದ್ದಳು. ಆಸ್ಪತ್ರೆಗೆ ಕರೆದೊಯ್ಯುವಾಗ ಆಕೆ ಸಾವನ್ನಪ್ಪಿದ್ದಳು.

ಈ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Bengaluru: ಸೂಟ್‌ಕೇಸ್‌ನಲ್ಲಿ ಬಾಲಕಿಯ ಶವ ಪತ್ತೆ ಪ್ರಕರಣ: ಬಿಹಾರದ 7ಮಂದಿಯ ಬಂಧನ