Select Your Language

Notifications

webdunia
webdunia
webdunia
webdunia

ಅನೈತಿಕ ಸಂಬಂಧ ಯಾವ ಹಂತಕ್ಕೆ ತಂತು ನೋಡಿ..!

ಅನೈತಿಕ ಸಂಬಂಧ ಯಾವ ಹಂತಕ್ಕೆ ತಂತು ನೋಡಿ..!
ಬೆಂಗಳೂರು , ಶುಕ್ರವಾರ, 14 ಜೂನ್ 2019 (18:12 IST)
ಬಾಡಮೇರ್(ರಾಜಸ್ಥಾನ): ವಿವಾಹಿತ ಮಹಿಳೆ ಮತ್ತು ಆಕೆಯ ಪ್ರಿಯಕರ ತಮ್ಮನ್ನು ತಾವೇ ಶೂಟ್ ಮಾಡಿಕೊಳ್ಳುವ ಮುನ್ನ ಮದ್ಯ ಸೇವಿಸಿ ಫೋಟೋಗಳನ್ನು ತೆಗೆದುಕೊಂಡ ವಿಚಿತ್ರ ಘಟನೆ ವರದಿಯಾಗಿದೆ
21 ವಯಸ್ಸಿನ ಅಂಜು ಸುತಾರ್ ಎನ್ನುವ ಮಹಿಳೆಯೊಂದಿಗೆ ಆಕೆಯ ವಿವಾಹಕ್ಕೂ ಮುನ್ನವೇ ಶಮಕರ್ ಚೌಧರಿ ಅನೈತಿಕ ಸಂಬಂಧ ಹೊಂದಿದ್ದನು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
 
ಪ್ರೇಮ ಜೀವನದಲ್ಲಿ ವಿಫಲವಾಗಿದ್ದರಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದೇವೆ ಎಂದು ಮೃತಜೋಡಿ ಮೊಬೈಲ್‌ನಲ್ಲಿ ಆಡಿಯೋ ಸಂದೇಶವನ್ನು ರೆಕಾರ್ಡ್ ಮಾಡಿದ್ದಾರೆ. ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
 
ಕಂಟ್ರಿ ಮೇಡ್ ಪಿಸ್ತೂಲ್‌ಗಳಿಂದ ತಮ್ಮನ್ನು ತಾವು ಶೂಟ್ ಮಾಡಿಕೊಂಡಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಮದ್ಯದ ಬಾಟಲಿಗಳು , ಸೀಗರೇಟು ಪ್ಯಾಕೆಟ್‌ಗಳು ಪತ್ತೆಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಪ್ರೇಮಜೋಡಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತಮ್ಮ ಮೊಬೈಲ್‌ನಿಂದ ಹಲವಾರು ಫೋಟೋಗಳನ್ನು ತೆಗೆದುಕೊಂಡಿದ್ದಲ್ಲದೇ ತಾವು ವಿವಾಹವಾಗಿರುವುದಾಗಿ ಕೈಯಲ್ಲಿದ್ದ ರಿಂಗ್ ತೋರಿಸಿದ ಫೋಟೋಗಳು ಲಭ್ಯವಾಗಿವೆ.
 
ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮುಂದುವರಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗು ಅತ್ತಿದ್ದಕ್ಕೆ ಬರೆ ಹಾಕಿದ ಅಂಗನವಾಡಿ ಶಿಕ್ಷಕಿ