Webdunia - Bharat's app for daily news and videos

Install App

ರಾಜ ರಘುವಂಶಿ ಹತ್ಯೆಯಾಗುವ ಮುನ್ನ ಪತ್ನಿ ಸೋನಂ ಜೊತೆಗಿದ್ದ ವಿಡಿಯೋ ವೈರಲ್

Krishnaveni K
ಸೋಮವಾರ, 16 ಜೂನ್ 2025 (15:26 IST)
Photo Credit: Instagram
ಇಂಧೋರ್: ಮೇಘಾಲಯದಲ್ಲಿ ಹನಿಮೂನ್ ಗೆ ಹೋಗಿದ್ದಾಗ ಹತ್ಯೆಯಾಗಿದ್ದ ರಾಜ ರಘುವಂಶಿ ತನ್ನ ಪತ್ನಿ ಸೋನಂ ಜೊತೆಗಿದ್ದ ಕೊನೆಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


ರಾಜ ರಘುವಂಶಿಯನ್ನು ಪತ್ನಿ ಸೋನಂ ತನ್ನ ಪ್ರಿಯಕರ ರಾಜ್ ಕುಶ್ವಾಹ ಮತ್ತು ಸಹಚರರೊಂದಿಗೆ ಸೇರಿಕೊಂಡು ಹತ್ಯೆ ಮಾಡಿದ್ದಾಳೆ ಎಂಬುದು ಆರೋಪವಾಗಿದೆ. ಈ ಸಂಬಂಧ ಸೋನಂಳನ್ನು ಮತ್ತು ಆಕೆಯ ಪ್ರಿಯಕರ ಸೇರಿದಂತೆ ಎಲ್ಲಾ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಜೂನ್ 2 ರಂದು ಮೇಘಾಲಯದ ಕಮರಿಯಲ್ಲಿ ರಾಜ ರಘುವಂಶಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸೋನಂ ಮತ್ತು ಸಹಚರರು ಆತನನ್ನು ಪ್ಲ್ಯಾನ್ ಮಾಡಿ ಬೆಟ್ಟ ಹತ್ತಿಸಿ ಅಲ್ಲಿ ತಲೆಗೆ ಹೊಡೆದು ಕೊಲೆ ಮಾಡಿ ಕಮರಿಗೆ ಎಸೆದಿದ್ದಾರೆ ಎಂದು ಆರೋಪವಾಗಿದೆ.

ಇದೀಗ ಸೋನಂ ಜೊತೆ ರಾಜ ರಘುವಂಶಿ ಬೆಟ್ಟ ಹತ್ತುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಆ ಸಂದರ್ಭದಲ್ಲಿ ಅಲ್ಲಿಗೆ ಬಂದಿದ್ದ ಪ್ರವಾಸಿಗರೊಬ್ಬರು ಸೆರೆ ಹಿಡಿದ ವಿಡಿಯೋದಲ್ಲಿ ಇಬ್ಬರನ್ನೂ ಕಾಣಬಹುದಾಗಿದೆ. ದೇವ್ ಸಿಂಗ್ ಎಂಬವರು ಇದನ್ನು ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡಿದ್ದಾರೆ. ಈ ದಂಪತಿಯನ್ನು ನಾನು ನೋಡಿದ್ದೆ. ನಾನು ಮಾಡಿದ್ದ ವಿಡಿಯೋದಲ್ಲಿ ಈ ಇಬ್ಬರೂ ಇದ್ದಿದ್ದು ಕಂಡುಬಂದಿದೆ ಎಂದಿದ್ದಾರೆ. ಈ ವಿಡಿಯೋದಲ್ಲಿ ಸೋನಂ ಮುಂದಿದ್ದರೆ ಅವಳ ಹಿಂದೆಯೇ ರಾಜ ರಘುವಂಶಿ ಕೂಡಾ ಹೆಜ್ಜೆ ಹಾಕುತ್ತಿದ್ದಾರೆ.


 
 
 
 
 
 
 
 
 
 
 
 
 
 
 

A post shared by Dev (@m_devsingh)

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜ ರಘುವಂಶಿ ಹತ್ಯೆಯಾಗುವ ಮುನ್ನ ಪತ್ನಿ ಸೋನಂ ಜೊತೆಗಿದ್ದ ವಿಡಿಯೋ ವೈರಲ್

ಹಾಸನದ ಬೆನ್ನಲ್ಲೇ ಬೆಂಗಳೂರಿನ ಕೆಲವು ಶಾಲೆಗಳಿಗೆ ಬಾಂಬ್‌ ಬೆದರಿಕೆ: ರಾಜ್ಯ ರಾಜಧಾನಿಯಲ್ಲಿ ಹೈಲರ್ಟ್‌

Israel-Iran conflict: ಇರಾನ್‌ನಲ್ಲಿ ಮೃತರ ಸಂಖ್ಯೆ 230ಕ್ಕೆ ಏರಿಕೆ: 1,277ಕ್ಕೂ ಅಧಿಕ ಮಂದಿ ಗಾಯ

Karnataka Rains: ಮಂಗಳೂರಿನಲ್ಲಿ ಈಗ ಇರೋದು ರೋಡಲ್ಲ ಎಲ್ಲಾ ತೋಡು

16ನೇ ಜನಗಣತಿಗೆ ಮೂಹೂರ್ತ ಫಿಕ್ಸ್‌: ಜಾತಿಗಣತಿಗೂ ಗ್ರೀನ್‌ಸಿಗ್ನಲ್‌, ಎಷ್ಟು ಹಂತದಲ್ಲಿ ನಡೆಯುತ್ತೆ ಗೊತ್ತಾ

ಮುಂದಿನ ಸುದ್ದಿ
Show comments