Select Your Language

Notifications

webdunia
webdunia
webdunia
webdunia

ಶನಿವಾರದ ಒಳಗಡೆ ಸರ್ಕಾರಿ ಬಂಗಲೆ ತೊರೆಯಲಿದ್ದಾರೆ ರಾಹುಲ್ ಗಾಂಧಿ

ಶನಿವಾರದ ಒಳಗಡೆ ಸರ್ಕಾರಿ ಬಂಗಲೆ ತೊರೆಯಲಿದ್ದಾರೆ ರಾಹುಲ್ ಗಾಂಧಿ
ನವದೆಹಲಿ , ಶುಕ್ರವಾರ, 21 ಏಪ್ರಿಲ್ 2023 (13:12 IST)
ನವದೆಹಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರದ ಒಳಗಡೆ ದೆಹಲಿಯ ತುಘಲಕ್ ಲೇನ್ನಲ್ಲಿರುವ ತಮ್ಮ ಅಧಿಕೃತ ಬಂಗಲೆಯನ್ನು ತೊರೆಯಲು ನಿರ್ಧರಿಸಿದ್ದಾರೆ.
 
ಎರಡು ವರ್ಷಗಳ ಶಿಕ್ಷೆಗೆ ಗುರಿಯಾದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸಚಿವಾಲಯ ವಯನಾಡು ಲೋಕಸಭಾ ಕ್ಷೇತ್ರದಿಂದ ಅನರ್ಹ ಮಾಡಲಾಗಿತ್ತು. ಅನರ್ಹ ಮಾಡಿದ ಬಳಿಕ ಸರ್ಕಾರಿ ಬಂಗಲೆಯಲ್ಲಿ ಉಳಿಯಲು ಸಾಧ್ಯವಿಲ್ಲದ ಕಾರಣ ಲೋಕಸಭೆಯ ವಸತಿ ಸಮಿತಿಯು ಗಾಂಧಿಯವರಿಗೆ ನೋಟಿಸ್ ಜಾರಿ ಮಾಡಿತ್ತು. 

ರಾಹುಲ್ ಗಾಂಧಿ ಆ ಬಂಗಲೆಯಲ್ಲಿ 2005ರಿಂದ ವಾಸವಾಗಿದ್ದರು. ಲೋಕಸಭೆಯ ವಸತಿ ಸಮಿತಿಯು ಭಾನುವಾರದ ಒಳಗಡೆ ಮನೆ ಖಾಲಿ ಮಾಡಲು ಗಡವು ನಿಗದಿಪಡಿಸಿತ್ತು

ಕೇಂದ್ರ ದೆಹಲಿಯ ಜನಪಥ್ನಲ್ಲಿರುವ ತಾಯಿ ಸೋನಿಯಾ ಗಾಂಧಿ ಅವರ ಬಂಗಲೆಗೆ ತೆರಳುವುದಾಗಿ ರಾಹುಲ್ ಗಾಂಧಿಯವರ ಕಚೇರಿ ತಿಳಿಸಿದೆ. ಅಲ್ಲದೆ ಕಳೆದ ವಾರ ಮನೆಯ ಸಾಮಾಗ್ರಿಗಳನ್ನು ಟ್ರಕ್ನಲ್ಲಿ ಸಾಗಿಸಿದ್ದು ಕಂಡು ಬಂದಿತ್ತು. ಇನ್ನೂ ಮನೆ ಖಾಲಿ ಮಾಡಲು ಒಪ್ಪಿಕೊಂಡಿರುವ ರಾಹುಲ್ ಗಾಂಧಿಯವರಿಗೆ ಪಕ್ಷದ ನಾಯಕರು ಮನೆಗಳ ಆಫರ್ಗಳನ್ನು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ 18 ವರ್ಷ ತುಂಬದ ಮೊಮ್ಮಗ ಜೊತೆ ಪ್ರಚಾರಕ್ಕೆ ಬರ್ತಿದ್ದಾರೆ : ಪ್ರತಾಪ್ ಸಿಂಹ