Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ 18 ವರ್ಷ ತುಂಬದ ಮೊಮ್ಮಗ ಜೊತೆ ಪ್ರಚಾರಕ್ಕೆ ಬರ್ತಿದ್ದಾರೆ : ಪ್ರತಾಪ್ ಸಿಂಹ

ಸಿದ್ದರಾಮಯ್ಯ 18 ವರ್ಷ ತುಂಬದ ಮೊಮ್ಮಗ ಜೊತೆ ಪ್ರಚಾರಕ್ಕೆ ಬರ್ತಿದ್ದಾರೆ : ಪ್ರತಾಪ್ ಸಿಂಹ
ಮೈಸೂರು , ಶುಕ್ರವಾರ, 21 ಏಪ್ರಿಲ್ 2023 (12:58 IST)
ಮೈಸೂರು : ವರುಣಾ ಕ್ಷೇತ್ರದಲ್ಲಿ 1 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಹೇಳುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯಗೆ ಭಯ, ಪುಕ್ಕಲುತನ ಕಾಡ್ತಿದೆ. ಹಾಗಾಗಿ 18 ವರ್ಷ ತುಂಬದ ಮೊಮ್ಮಗನ ಜೊತೆ ಪ್ರಚಾರಕ್ಕೆ ಬರ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
 
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಪುಕ್ಕಲುತನ, ಭಯ ಕಾಡುತ್ತಿದೆ. ಹಾಗಾಗಿ 18 ವರ್ಷ ತುಂಬದ ಮೊಮ್ಮಗನ ಜೊತೆ ಪ್ರಚಾರಕ್ಕೆ ಬರುತ್ತಿದ್ದಾರೆ. ಕುಟುಂಬದವರನ್ನ ಕರೆದುಕೊಂಡು ಪೂಜೆ ಪುನಸ್ಕಾರ ಮಾಡಿ, ಸೆಂಟಿಮೆಂಟಾಗಿ ಮತ ಕೇಳ್ತಿದ್ದಾರೆ. ಭಯ ಮತ್ತು ಪುಕ್ಕಲುತನಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಎಂದು ಪ್ರಶ್ನಿಸಿದ್ದಾರೆ. 

ಕಾಂಗ್ರೆಸ್ಗೆ ಹೋದಮೇಲೆ ನಿಮ್ಮಲ್ಲಿರುವ ನೈತಿಕತೆ ಸಿದ್ಧಾಂತ ಸತ್ತು ಹೋಯ್ತಾ? ನಾವು ಕಂಡ ಸಿದ್ದರಾಮಯ್ಯ ಜನರಿಗೆ ವೇದ, ಬೋಧನೆ ಮಾಡ್ತಾ ಇದ್ದವರು. ಆ ಸಿದ್ದರಾಮಯ್ಯ ಎಲ್ಲಿ ಹೋದ್ರು? ಕಾಂಗ್ರೆಸ್ಗೆ ಹೋದ ಬಳಿಕ ನಿಮ್ಮ ಸಿದ್ಧಾಂತ, ನೈತಿಕತೆಯನ್ನ ಕಾಂಗ್ರೆಸ್ಗೆ ಅಡವಿಟ್ಟರಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಅಭ್ಯರ್ಥಿಯಿಂದ ಮತದಾರರಿಗೆ ಹಣ ಹಂಚಿಕೆ ಆರೋಪ