Publish Date: Thu, 20 Apr 2023 (15:31 IST)
Updated Date: Thu, 20 Apr 2023 (15:46 IST)
ಇಂದು ಮುಸ್ಲಿಮರಿಗೆ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ. ಕ್ರಿಮಿನಲ್ಗಳಿಗೆ ನಾಯಕ KPCC ಅಧ್ಯಕ್ಷ ಡಿ.ಕೆ .ಶಿವಕುಮಾರ್ ಎಂದು ಕಾಂಗ್ರೆಸ್ ನಾಯಕರ ವಿರುದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಲೇವಡಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, PFI ಬ್ಯಾನ್ ಮಾಡಬೇಕು ಎಂದು ಆಗಿನ ಗೃಹ ಸಚಿವರಾಗಿದ್ದ ರಾಮಲಿಂಗಾ ರೆಡ್ಡಿಗೆ ಕೇಂದ್ರ ಮಾಹಿತಿ ಕೇಳಿತ್ತು.. ಆದರೆ PFI ಬ್ಯಾನ್ ಮಾಡುವ ಪ್ರಸಂಗ ಇಲ್ಲ ಎಂದು ರಾಮಲಿಂಗಾ ರೆಡ್ಡಿ ಕೇಂದ್ರಕ್ಕೆ ಪ್ರತಿಕ್ರಿಯಿಸಿದ್ರು.. 1,700 PFI ಕಾರ್ಯಕರ್ತರ ಕೇಸ್ ಅನ್ನ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ವಾಪಸ್ ಪಡೆದ್ರು. ಕಾಂಗ್ರೆಸ್ ಕೈಗೆ ರಕ್ತ ಅಂಟಿದೆ, ಇಂಥಹ ವಿಚಾರ ನೋಡಿದ್ರೆ ಅವರಿಗೆ ವೋಟ್ ನೀಡಬೇಕೆಂಬ ಪ್ರಶ್ನೆಯೇ ಬರಲ್ಲ. ನಮಗೆ ನಮ್ಮ ಭಾಗದಲ್ಲಿ ಓಡಾಡೋಕೆ ಭಯ ಆಗ್ತಿದೆ.. ನಮ್ಮ ಕಾರು ಹೋಗುವಾಗ ಹಸಿರು ಧ್ವಜ ಹಿಡಿದು ಹಿಂದೆ ಬರ್ತಾರೆ.. ಇವರಿಗೆ ಹೇಗೆ ಧೈರ್ಯ ಬಂತು ಎಂದು ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ.