Publish Date: Thu, 02 Nov 2017 (10:37 IST)
Updated Date: Thu, 02 Nov 2017 (10:40 IST)
ರಾಯ್ ಬರೇಲಿ: ಸೋನಿಯಾ ಗಾಂಧಿ ಪ್ರತಿನಿಧಿಸುವ ಸಂಸದೀಯ ಕ್ಷೇತ್ರ ರಾಯ್ ಬರೇಲಿಯಲ್ಲಿ ಉಷ್ಣವಿದ್ಯುತ್ ನಿಗಮ (ಎನ್ ಟಿಪಿಸಿ) ಘಟಕದಲ್ಲಿ ಬಾಯ್ಲರ್ ಸ್ಪೋಟಗೊಂಡ ಪರಿಣಾಮ 20 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ಈ ಹಿನ್ನಲೆಯಲ್ಲಿ ಗುಜರಾತ್ ಪ್ರವಾಸಕ್ಕೆ ತೆರಳಲಿದ್ದ ರಾಹುಲ್ ಗಾಂಧಿ ತಮ್ಮ ಪ್ರವಾಸ ಮೊಟಕುಗೊಳಿಸಿ ರಾಯ್ ಬರೇಲಿಗೆ ತೆರಳಿದ್ದಾರೆ. ಸಂತ್ರಸ್ತರನ್ನು ಕಂಡ ಮೇಲೆ ಗುಜರಾತ್ ಗೆ ಮರಳುವುದಾಗಿ ಅವರು ತಮ್ಮ ಟ್ವಿಟರ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.
800 ಕ್ಕೂ ಹೆಚ್ಚು ಕಾರ್ಮಿಕರು ಕಾರ್ಯ ನಿರ್ವಹಿಸುವ ಉಷ್ಣ ಘಟಕದಲ್ಲಿ ನಿನ್ನೆ ಮಧ್ಯಾಹ್ನ ಸ್ಪೋಟ ಸಂಭವಿಸಿತ್ತು. ಸಾವು ನೋವಿನ ಸಂಖ್ಯೆ ಇನ್ನೂ ಹೆಚ್ಚುವ ಸಂಭವವಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ