Publish Date: Thu, 16 Nov 2017 (08:50 IST)
Updated Date: Thu, 16 Nov 2017 (08:52 IST)
ಅಹಮ್ಮದಾಬಾದ್: ಗುಜರಾತ್ ಚುನಾವಣೆ ಪ್ರಚಾರಕ್ಕಾಗಿ ಗುಜರಾತ್ ನಲ್ಲಿ ಬೀಡುಬಿಟ್ಟಿರುವ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಆಗಾಗ ಪ್ರಧಾನಿ ಮೋದಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿರುತ್ತಾರೆ. ಆದರೆ ಈ ರೀತಿ ಅವರು ಟೀಕಿಸಿದ ಮಾತು ಅವರಿಗೇ ತಿರುಗುಬಾಣವಾಗಿದೆ.
ಚುನಾವಣಾ ರ್ಯಾಲಿಯೊಂದರಲ್ಲಿ ಪ್ರಧಾನಿ ಮೋದಿಯನ್ನು ತಮಾಷೆ ಮಾಡುತ್ತಾ ರಾಹುಲ್ ಗಾಂಧಿ ‘ನಾನು ಎಂತಹ ಮಿಷನ್ ತರುತ್ತೇನೆಂದರೆ, ಈ ಕಡೆಯಿಂದ ಆಲೂಗಡ್ಡೆ ಹಾಕಿದರೆ, ಆ ಬದಿಯಿಂದ ಚಿನ್ನದ ಗಟ್ಟಿ ಬಂದು ಬೀಳುತ್ತದೆ’ ಎಂದಿದ್ದರು.
ಪ್ರಧಾನಿ ಮೋದಿ ಈ ರೀತಿ ಜನರನ್ನು ಮರಳು ಮಾಡುತ್ತಾರೆಂದು ತಮಾಷೆ ಮಾಡಲು ಹೋದ ರಾಹುಲ್ ಮೋದಿ ಅಭಿಮಾನಿಗಳಿಂದ ತಾವೇ ತಮಾಷೆಯ ವಸ್ತುವಾಗಿದ್ದಾರೆ. ನೋಡಿ ರಾಹುಲ್ ಗಾಂಧಿ ಚಿನ್ನ ಮಾರುತ್ತಿರುವ ಹೊಸ ಫೋಟೋ ಎಂದು ಕೆಲವರು ತಮಾಷೆ ಮಾಡಿದರೆ ಇನ್ನು ಕೆಲವರು, ರಾಹುಲ್ ಗಾಂಧಿ ದೇಶದ ಬೆಸ್ಟ್ ಕಾಮೆಡಿಯನ್ ಎಂದು ನಾನು ಹೇಳುವಾಗ ನಿಮಗೆ ಯಾರಿಗಾದರೂ ಕೋಪ ಬಂದರೆ ಕ್ಷಮೆಯಿರಲಿ ಎಂದು ಕಾಲೆಳೆದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ