Select Your Language

Notifications

webdunia
webdunia
webdunia
webdunia

1 ತಾಸಿಗೆ 20 ಸಾವಿರ, ರಾತ್ರಿಗೆ 50 ಸಾವಿರ: ಭಾರಿ ಸೆಕ್ಸ್ ರಾಕೆಟ್ ಬಯಲಿಗೆ

webdunia
ಬುಧವಾರ, 15 ನವೆಂಬರ್ 2017 (20:25 IST)
ಆನ್‌ಲೈನ್ ಮೂಲಕ ಗಿರಾಕಿಗಳನ್ನು ಸೆಳೆಯುತ್ತಿದ್ದು 1 ತಾಸಿಗೆ 20 ಸಾವಿರ, ರಾತ್ರಿಗೆ 50 ಸಾವಿರ ಡಿಮ್ಯಾಂಡ್‌ ಮಾಡುತ್ತಿದ್ದ ಸೆಕ್ಸ್ ರಾಕೆಟ್ ಯುವತಿಯರನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಅಪರಾಧ ದಳದ ಅಧಿಕಾರಿಗಳಿಗೆ ಹೈಪ್ರೋಫೈಲ್ ಸೆಕ್ಸ್ ರಾಕೆಟ್ ನಡೆಯುತ್ತಿದೆ ಎನ್ನುವ ಮಾಹಿತಿ ಸ್ಥಳೀಯರಿಂದ ಲಿಭಿಸಿತ್ತು. ಪೊಲೀಸರು ಗ್ರಾಹಕನ ವೇಷದಲ್ಲಿ ಯುವತಿಯರನ್ನು ಸಂಪರ್ಕಿಸಿದ್ದಾರೆ. ಶ್ರೀಮಂತರಂತೆ ವೇಷಧರಿಸಿದ್ದರನ್ನು ಕಂಡ ಯುವತಿಯರು  1 ತಾಸಿಗೆ 20 ಸಾವಿರ, ರಾತ್ರಿಗೆ 50 ಸಾವಿರ ಡಿಮ್ಯಾಂಡ್‌ ಮಾಡಿದ್ದಾರೆ.
 
ಕುರ್ಲಾದ ಕುಮ್ಗಾರ್ ನಗರದಲ್ಲಿರುವ ಅಪಾರ್ಟ್‌ಮೆಂಟ್‌ಗೆ ಬರುವಂತೆ ಯುವತಿಯರು ಗ್ರಾಹಕನಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಅಪಾರ್ಟ್‌ಮೆಂಟ್ ಮೇಲೆ ದಾಳಿ ಮಾಡಿ ಯುವತಿಯರನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.   
 
ಪೊಲೀಸರು ದಾಳಿ ನಡೆಸಿದಾಗ ಅಪಾರ್ಟ್‌ಮೆಂಟ್‌ನಲ್ಲಿದ್ದ ಐವರು ಯುವತಿಯರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ನೀವು ಚುನಾವಣೆಯಲ್ಲಿ ಗೆಲ್ಲಿಸದಿದ್ರೆ ನಾನು ಸಾಯ್ತಿನಿ ಅಂದ ಮಾಜಿ ಸಚಿವ