Select Your Language

Notifications

webdunia
webdunia
webdunia
webdunia

ತಂದೆ, ಸಹೋದರ 9 ವರ್ಷ ರೇಪ್ ಮಾಡಿದ್ರು, ತಾಯಿ 8 ಬಾರಿ ಗರ್ಭಪಾತ ಮಾಡಿಸಿದಳು: ಯುವತಿ

ತಂದೆ, ಸಹೋದರ 9 ವರ್ಷ ರೇಪ್ ಮಾಡಿದ್ರು, ತಾಯಿ 8 ಬಾರಿ ಗರ್ಭಪಾತ ಮಾಡಿಸಿದಳು: ಯುವತಿ
ಲಕ್ನೋ , ಶನಿವಾರ, 11 ನವೆಂಬರ್ 2017 (19:47 IST)
ಹೆತ್ತ ತಂದೆ ಮತ್ತು ಹಿರಿಯ ಸಹೋದರ ನಿರಂತರವಾಗಿ ಒಂಬತ್ತು ವರ್ಷಗಳ ಕಾಲ ಅತ್ಯಾಚಾರವೆಸಗಿದ್ದರೆ, ತಾಯಿ ಎಂಟು ಬಾರಿ ನನ್ನ ಗರ್ಭಪಾತ ಮಾಡಿಸಿದ್ದಾಳೆ ಎಂದು ಯುವತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. 
ಅಜ್ಜ ಅಜ್ಜಿಯ ಮನೆಯಲ್ಲಿ ಒಂಬತ್ತು ವರ್ಷಗಳಿಂದ ವಾಸವಾಗಿದ್ದ ಸೀಮಾ(ಹೆಸರು ಬದಲಿಸಲಾಗಿದೆ) ಪೋಷಕರ ಮನೆಗೆ ಮರಳಿದ್ದಾಳೆ. ನಾನು ಮನೆಗೆ ಬಂದ ದಿನವೇ ತಂದೆತಾಯಿ ಬೇರೆ ಮನೆಗೆ ಶಿಫ್ಟ್ ಆಗಿದ್ದಾರೆ. ಅದೇ ದಿನವೇ ತಂದೆ ಅನಾರೋಗ್ಯಕ್ಕೆ ಈಡಾಗಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾಳೆ.
 
ಅನಾರೋಗ್ಯಕ್ಕೆ ಈಡಾದ ತಂದೆ ವೈದ್ಯರ ಬಳಿ ಹೋಗುವುದು ಬಿಟ್ಟು ಮಾಂತ್ರಿಕನ ಮೊರೆಹೋಗಿದ್ದಾರೆ. ಜೀವ ಉಳಿಯಬೇಕಾದರೆ ಪುತ್ರಿಯೊಂದಿಗೆ ಸೆಕ್ಸ್ ಸುಖ ಅನುಭವಿಸಬೇಕು ಎಂದು ಮಾಂತ್ರಿಕ ಬಿಟ್ಟಿ ಸಲಹೆ ನೀಡಿದ್ದಾನೆ.
 
ಅಂದಿನಿಂದ ಪ್ರತಿ ರಾತ್ರಿ ತಂದೆ ಪುತ್ರಿ ಸೀಮಾಳೊಂದಿಗೆ ಸೆಕ್ಸ್ ಸುಖ ಅನುಭವಿಸುತ್ತಿದ್ದ. ಆಕೆ ನಿರಾಕರಿಸಿದಾಗ ಮನಬಂದಂತೆ ಥಳಿಸುತ್ತಿದ್ದ. ಒಂದು ಬಾರಿ ಧೈರ್ಯ ಮಾಡಿ ಹಿರಿಯ ಸಹೋದರನಿಗೆ ತಂದೆಯ ಹೀನ ಕೃತ್ಯದ ಬಗ್ಗೆ ತಿಳಿಸಿದೆ. ಮತ್ತಷ್ಟು ಆಘಾತಕಾರಿ ವಿಷಯವೆಂದರೆ, ಸಹೋದರ ತಂದೆಗೆ ಬುದ್ದಿ ಹೇಳುವುದು ಬಿಟ್ಟು ನನ್ನ ಮೇಲೆ ಅತ್ಯಾಚಾರವೆಸಗಲು ಆರಂಭಿಸಿದ.
 
ತಂದೆ ಮತ್ತು ಸಹೋದರ ನಿರಂತರವಾಗಿ ಒಂಬತ್ತು ವರ್ಷಗಳ ಕಾಲ ಅತ್ಯಾಚಾರವೆಸಗಿದ್ದಾರೆ. ತಾಯಿ ತನ್ನ ಪತಿ ಮತ್ತು ಪುತ್ರನಿಗೆ ಬುದ್ದಿ ಹೇಳುವುದು ಬಿಟ್ಟು ಅವರೊಂದಿಗೆ ಸುಮ್ಮನೆ ಸಹಕರಿಸು ಎಂದು ನನ್ನ ಮೇಲೆ ಒತ್ತಡ ಹೇರಿದ್ದಳು. ಒಂಬತ್ತು ವರ್ಷದಲ್ಲಿ ಎಂಟು ಬಾರಿ ಗರ್ಭವತಿಯಾಗಿದ್ದೆ. ತಾಯಿ ತನ್ನನ್ನು ವೈದ್ಯರಲ್ಲಿ ಕರೆದುಕೊಂಡು ಹೋಗಿ ಗರ್ಭಪಾತ ಮಾಡಿಸಿದಳು ಎಂದು ತಿಳಿಸಿದ್ದಾಳೆ.
 
ಕೊನೆಗೆ ಸರಕಾರಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವ ನೆಪದಲ್ಲಿ ಜನತಾ ದರ್ಬಾರ್‌ನಲ್ಲಿ ಸಿಎಂ ಅವರನ್ನು ಭೇಟಿ ಮಾಡಿ ನನ್ನ ಕಷ್ಟಗಳನ್ನು ವಿವರಿಸಿದೆ. ಸಿಎಂ ಕೂಡಲೇ ತನಿಖೆಗೆ ಆದೇಶಿಸಿದ ನಂತರ ಪೋಷಕರು ಮತ್ತು ಸಹೋದರನನ್ನು ಬಂಧಿಸಲಾಯಿತು ಎಂದು ಮಾಹಿತಿ ನೀಡಿದ್ದಾಳೆ.
 
ನಯಿ ಆಶಾ ಎನ್ನುವ ಎನ್‌ಜಿಓ ಸಂಸ್ಥೆಯ ನೆರವಿನಿಂದ ಬ್ಯೂಟಿಶಿಯನ್ ತರಬೇತಿ ಪಡೆದು ಮನೆಯಲ್ಲಿಯೇ ಬ್ಯೂಟಿ ಪಾರ್ಲರ್ ನಡೆಸುತ್ತಿರುವುದಾಗಿ ಸೀಮಾ ತಮ್ಮ ಹೃದಯ ವಿದ್ರಾವಕ ಘಟನೆ ಬಿಚ್ಚಿಟ್ಟಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ವಿರುದ್ಧ ಏಕವಚನದಲ್ಲಿ ವಾಗ್ದಾಳಿ: ಬಿಜೆಪಿ ಶಾಸಕನಿಗೆ ಷರತ್ತುಬದ್ಧ ಜಾಮೀನು