Publish Date: Wed, 08 Nov 2017 (18:22 IST)
Updated Date: Wed, 08 Nov 2017 (18:24 IST)
ಹರಿಜನ ಹಾಡಿಯ ಅಧ್ಯಯನಕ್ಕೆ ಬಂದಿದ್ದ ಅಮೆರಿಕ ಮೂಲದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ನ್ಯಾಯಾಲಯ 25 ವರ್ಷ ಕಠಿಣ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಕಳೆದ 2015ರಲ್ಲಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದ ಅಮೆರಿಕದ ಮಹಿಳೆಯ ಮೇಲೆ ಆರೋಪಿ ಸುಮಿತ್ ಲೈಂಗಿಕ ದೌರ್ಜನ್ಯ ಎಸಗಿದ್ದ. ನಂತರ ಆರೋಪಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು.
ಅಪರಾಧಿ 26 ವರ್ಷ ವಯಸ್ಸಿನ ಸುಮಿತ್‌ಗೆ ಮೈಸೂರಿನ 7ನೇ ಸತ್ರ ನ್ಯಾಯಾಲಯ 25 ವರ್ಷಗಳ ಕಠಿಣ ಶಿಕ್ಷೆ 15 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಸ್ಕೈಪ್ ಮೂಲಕ ಕೋರ್ಟ್ ಅಮೆರಿಕ ಮಹಿಳೆಯ ವಿಚಾರಣೆ ನಡೆಸಿತ್ತು. ಸಂತ್ರಸ್ಥೆ ಮಹಿಳೆಯ ಪರ ಖ್ಯಾತ ವಕೀಲರಾದ ಹನುಮಂತಪ್ಪ ವಾದಿಸಿದರು. ಲೈಂಗಿಕ ದೌರ್ಜನ್ಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.