Select Your Language

Notifications

webdunia
webdunia
webdunia
webdunia

19 ವರ್ಷದ ವಿದ್ಯಾರ್ಥಿನಿಯ ಮೇಲೆ ಸತತ 3 ಗಂಟೆಗಳ ಕಾಲ ಗ್ಯಾಂಗ್‌ರೇಪ್

19 ವರ್ಷದ ವಿದ್ಯಾರ್ಥಿನಿಯ ಮೇಲೆ ಸತತ 3 ಗಂಟೆಗಳ ಕಾಲ ಗ್ಯಾಂಗ್‌ರೇಪ್
ಭೋಪಾಲ್ , ಶುಕ್ರವಾರ, 3 ನವೆಂಬರ್ 2017 (16:08 IST)
ಆಘಾತಕಾರಿ ಘಟನೆಯೊಂದರಲ್ಲಿ 19 ವರ್ಷದ ವಿದ್ಯಾರ್ಥಿನಿಯ ಮೇಲೆ ಕಾಮುಕರು ಸತತ ಮೂರು ಗಂಟೆಗಳ ಕಾಲ ಗ್ಯಾಂಗ್‌ರೇಪ್ ಎಸಗಿದ ಘಟನೆ ವರದಿಯಾಗಿದೆ.
ಐಎಎಸ್ ಪರೀಕ್ಷೆಗಾಗಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿನಿಯನ್ನು ಹಬೀಬ್‌ಗಂಜ್ ರೈಲ್ವೆ ನಿಲ್ದಾಣದ ಬಳಿಯಿಂದ ಅಪಹರಿಸಿದ ನಾಲ್ವರು ಆರೋಪಿಗಳು ಆಕೆಯ ಮೇಲೆ ಗ್ಯಾಂಗ್‌ರೇಪ್ ಎಸಗಿದ್ದಾರೆ.
 
ಮಹಾರಾಣಾ ಪ್ರತಾಪ್ ನಗರದಲ್ಲಿರುವ ಕೋಚಿಂಗ್ ಕ್ಲಾಸ್ ಮುಗಿಸಿಕೊಂಡು ವಿದ್ಯಾರ್ಥಿನಿ ಮನೆಗೆ ಮರಳುತ್ತಿರುವ ಸಂದರ್ಭದಲ್ಲಿ ಆರೋಪಿಗಳು ಆಕೆಯನ್ನು ಅಪಹರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ನಾಲ್ವರು ಆರೋಪಿಗಳು ವಿದ್ಯಾರ್ಥಿನಿಯ ಕೈಕಾಲು ಕಟ್ಟಿ ವಾಹನದೊಳಗೆ ತಳ್ಳಿದ್ದಾರೆ. ಆರೋಪಿಗಳು ಅತ್ಯಾಚಾರವೆಸಗುವ ಮುನ್ನ ರಸ್ತೆಯಲ್ಲಿಯೇ ಚಹಾ ಕುಡಿದು ಗುಟ್ಕಾ ತೆಗೆದುಕೊಂಡಿದ್ದಾರೆ ಎಂದ ಪೊಲೀಸರು ತಿಳಿಸಿದ್ದಾರೆ.
 
ಗ್ಯಾಂಗ್‌ರೇಪ್‌ಗೊಳಗಾದ ವಿದ್ಯಾರ್ಥಿನಿಯ ತಾಯಿ ಪೊಲೀಸ್ ಪೇದೆಯಾಗಿದ್ದು, ತಂದೆ ರೈಲ್ವೆ ಪೊಲೀಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.
 
ಆರೋಪಿಗಳಾದ ಗೋಲು ಬಿಹಾರಿ, ಅಮರ್ ಚಾಂಟು, ರಾಜೇಶ್ ಮತ್ತು ರಮೇಶ್ ಎಂದು ಗುರುತಿಸಲಾಗಿದೆ. ಆವರ ವಿರುದ್ಧ ಗ್ಯಾಂಗ್‌ರೇಪ್, ಅಪಹರಣ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಚೆನ್ನೈನಲ್ಲಿ ಭಾರೀ ಮಳೆ ಅವಾಂತರ: ಇಂದೂ ಸಹ ಭಾರೀ ಮಳೆ ಸಾಧ್ಯತೆ