Publish Date: Fri, 03 Nov 2017 (16:00 IST)
Updated Date: Fri, 03 Nov 2017 (16:04 IST)
ಚೆನ್ನೈ: ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಚೆನ್ನೈ ಹಾಗೂ ತಮಿಳುನಾಡಿನ ಕರಾವಳಿ ಭಾಗದ ಹಲವೆಡೆ ಇಂದೂ ಸಹ ಕೂಡ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ.
ಮಳೆ ಅವಾಂತರದಿಂದ ಹಲವು ಐಟಿ ಕಂಪೆನಿಗಳು ತಮ್ಮ ಸಿಬ್ಬಂದಿಗೆ ಮನೆಯಲ್ಲೇ ಕೆಲಸ ಮಾಡುವ ಅವಕಾಶ ನೀಡಿವೆ. ತಮಿಳುನಾಡಿನ ಹಲವೆಡೆ ಇಂದು ಕೂಡ ಭಾರೀ ಮಳೆಯಾಗಲಿದೆ. ಆದರೆ ಭಯ ಪಡುವ ಅಗತ್ಯವಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಭಾರೀ ಮಳೆಯಿಂದ ಚೆನ್ನೈ ಜನ ತತ್ತರಿಸಿ ಹೋಗಿದ್ದು, ಮನೆಗಳಿಗೆ ನೀರು ನುಗ್ಗಿ ಜನ ಪರದಾಡುವಂತಾಗಿದೆ. ರಸ್ತೆಯಲ್ಲಿ ಮಳೆ ನೀರು ನಿಂತಿದ್ದರಿಂದ ಪ್ರಯಾಣಿಕರು ಟ್ರಾಫಿಕ್ ನಲ್ಲಿ ಸಿಲುಕಿಕೊಂಡಿದ್ದರು. ವೈಮಾನಿಕ ಪ್ರಯಾಣದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಆದ್ರೆ ರಸ್ತೆ ಸಾರಿಗೆ ಮೇಲೆ ಪ್ರತಿಕೂಲ ಪರಿಣಾಮವಾಗಿದೆ. ಇಂದು ಕೂಡ ಇದೇ ಪರಿಸ್ಥಿತಿ ಮುಂದುವರಿದಿದೆ.