Select Your Language

Notifications

webdunia
webdunia
webdunia
webdunia

ಭಜ್ಜಿಗೆ ವಿಶೇಷ ಔತಣಕ್ಕೆ ಕರೆದು ಸರ್ಪ್ರೈಸ್ ನೀಡಿದ ಆಫ್ರಿದಿ… ಕಾರಣ ಗೊತ್ತಾ…?

ಭಜ್ಜಿಗೆ ವಿಶೇಷ ಔತಣಕ್ಕೆ ಕರೆದು ಸರ್ಪ್ರೈಸ್ ನೀಡಿದ ಆಫ್ರಿದಿ… ಕಾರಣ ಗೊತ್ತಾ…?
ನವದೆಹಲಿ , ಶನಿವಾರ, 28 ಅಕ್ಟೋಬರ್ 2017 (15:28 IST)
ನವದೆಹಲಿ: ಆಟದಲ್ಲಿ ಪರಸ್ಪರ ಎದುರಾಳಿಗಳು. ಆದರೆ ವೈಯಕ್ತಿಕ ಜಿವನವೇ ಬೇರೆ. ಹೀಗೆ ಪಾಕ್‌‌ ಕ್ರಿಕೆಟ್‌ ಟೀಂ ಮಾಜಿ ಕ್ಯಾಪ್ಟನ್ ಶಾಹಿದ್ ಆಫ್ರಿದಿ ಹಾಗೂ ಟೀಂ ಇಂಡಿಯಾ ಬೌಲರ್ ಹರ್ಭಜನ್ ಸಿಂಗ್ ಉತ್ತಮ ಉದ್ದೇಶಕ್ಕಾಗಿ ಒಂದಾಗಿದ್ದಾರೆ.

ಇವರಿಬ್ಬರು ಪಿಚ್ ನಲ್ಲಿ ಎದುರಾಳಿಗಳು. ಆದರೆ ಹೊರಗೆ ಒಳ್ಳೆಯ ಸ್ನೇಹಿತರು. ಈ ಇಬ್ಬರು ಆಟಗಾರರು ಬಹರೇನ್‌ ನ ಕಾರ್ಮಿಕರ ಶಿಬಿರಕ್ಕೆ ಭೇಟಿ ನೀಡಿ, ಅಲ್ಲಿನ 2 ಸಾವಿರಕ್ಕೂ ಹೆಚ್ಚು ಕಾರ್ಮಿಕರ ಜತೆ ಸೇರಿ ಒಟ್ಟಿಗೆ ಊಟ ಮಾಡಿದ್ದಾರೆ. 

ಬಹರೇನ್‌ ನ ಸಿತ್ರಾದಲ್ಲಿ 2 ಸಾವಿರಕ್ಕೂ ಹೆಚ್ಚು ಕಾರ್ಮಿಕರಿಗೆ ಶಾಹಿದ್ ಆಫ್ರಿದಿ ಫೌಂಡೇಷನ್ ಭೋಜನ ಕೂಟ ಏರ್ಪಡಿಸಿತ್ತು. ಇದರಲ್ಲಿ ಪಾಲ್ಗೊಳ್ಳಲು ಆಫ್ರಿದಿ ತನ್ನ ಗೆಳೆಯ ಹರ್ಭಜನ್ ಸಿಂಗ್‌ ಗೆ ಆಹ್ವಾನ ನೀಡಿದ್ದರು. ಇದನ್ನು ಪ್ರೀತಿಯಿಂದ ಸ್ವೀಕರಿಸಿದ ಭಜ್ಜಿ, ಕಾರ್ಮಿಕರ ಜತೆಗೂಡಿ ಊಟ ಮಾಡಿದ್ದು ವಿಶೇಷವಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಹಾರ್ದಿಕ್ ಪಾಂಡ್ಯಗೆ ವಂಚಿಸಿದ ಮುಂಬೈ ಶಾಲೆ