Publish Date: Fri, 12 Oct 2018 (07:06 IST)
Updated Date: Fri, 12 Oct 2018 (07:07 IST)
ನವದೆಹಲಿ: ಫ್ರಾನ್ಸ್ ಮತ್ತು ಭಾರತ ನಡುವೆ ನಡೆದ ರಾಫೆಲ್ ಯುದ್ಧ ವಿಮಾನ ಖರೀದಿ ಪಕ್ಕಾ ಹಗರಣ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೊಂಡಿದ್ದಾರೆ.
ರಾಫೆಲ್ ವಿಮಾನ ತಯಾರು ಮಾಡುವ ಫ್ರಾನ್ಸ್ ನ ದಸಾಲ್ತ್ ಆವಿಯೇಷನ್ ಸಂಸ್ಥೆ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಜತೆಗೇ ಸಹಭಾಗಿತ್ವ ಮಾಡಿಕೊಳ್ಳಬೇಕೆಂದು ಭಾರತದ ಕೇಂದ್ರ ಸರ್ಕಾರ ಷರತ್ತು ವಿಧಿಸಿತ್ತು ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ರಾಹುಲ್ ಈ ಆರೋಪ ಮಾಡಿದ್ದಾರೆ.
ಹಿಂದೆ ಮಾಜಿ ಫ್ರೆಂಚ್ ಅಧ್ಯಕ್ಷರು ಇದೇ ರೀತಿ ಹೇಳಿದ್ದರು. ಇದೀಗ ವಿಮಾನ ತಯಾರಿಕಾ ಸಂಸ್ಥೆಯೂ ಇದನ್ನೇ ಹೇಳಿದೆ. ಇದು ಪಕ್ಕಾ ಹಗರಣ ಎನ್ನುವುದು ಇದರಿಂದ ಸ್ಪಷ್ಟ ಎಂದು ರಾಹುಲ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.