Publish Date: Thu, 11 Oct 2018 (07:14 IST)
Updated Date: Thu, 11 Oct 2018 (08:09 IST)
ನವದೆಹಲಿ: ತಮ್ಮದೇ ಸರ್ಕಾರ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂತು ಎಂದು ವಿಡಿಯೋ ಸಮೇತ ಕಾಂಗ್ರೆಸ್ ಲೇವಡಿ ಮಾಡಿರುವುದರ ಬಗ್ಗೆ ಕೊನೆಗೂ ಸಚಿವ ನಿತಿನ್ ಗಡ್ಕರಿ ಪ್ರತಿಕ್ರಿಯೆ ನೀಡಿದ್ದಾರೆ.
ನಾನಾ ಪಾಟೇಕರ್ ಜತೆಗಿನ ಸಂದರ್ಶನವೊಂದರಲ್ಲಿ ನಿತಿನ್ ಗಡ್ಕರಿ ಮೋದಿ ಸರ್ಕಾರ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂತು ಎಂದು ಹೇಳುವ ವಿಡಿಯೋವನ್ನು ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿತ್ತು.
ಇದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ನಿತಿನ್ ಗಡ್ಕರಿ ಹಾಗೂ ಕೇಂದ್ರದ ವಿರುದ್ಧ ಟೀಕಾಪ್ರಹಾರ ನಡೆಸಿತ್ತು. ಇದರ ಬಗ್ಗೆ ಇದೀಗ ನಿತಿನ್ ಗಡ್ಕರಿ ಪ್ರತಿಕ್ರಿಯೆ ನೀಡಿದ್ದು, ‘ನಾನು ಇಂತಹ ಹೇಳಿಕೆ ನೀಡಿಯೇ ಇಲ್ಲ. ಇದು ಫೇಕ್. ಈ ಕಾರ್ಯಕ್ರಮ ಮರಾಠಿಯಲ್ಲಿ ಪ್ರಸಾರವಾಗಿತ್ತು. ಆದರೆ ಅಲ್ಲಿ ನಾನು ಮೋದಿ ಜಿ ಬಗ್ಗೆಯಾಗಲಿ, 15 ಲಕ್ಷ ಜನರ ಖಾತೆಗೆ ಹಾಕುವ ವಿಚಾರಗಳ ಬಗ್ಗೆಯಾಗಲೀ ಏನನ್ನೂ ಹೇಳಿಲ್ಲ. ರಾಹುಲ್ ಗಾಂಧಿಗೆ ಯಾವಾಗಿನಿಂದ ಮರಾಠಿ ಅರ್ಥ ಮಾಡಿಕೊಳ್ಳಲು ಪ್ರಾರಂಭಿಸಿದರುಎಂದು ನನಗೆ ಅರ್ಥವಾಗುತ್ತಿಲ್ಲ’ ಎಂದು ನಿತಿನ್ ಗಡ್ಕರಿ ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.