Select Your Language

Notifications

webdunia
webdunia
webdunia
webdunia

ಮೋದಿ ದೊಡ್ಡ ಪ್ರಾಬ್ಲಂ ಅಲ್ಲ, ಅವರನ್ನು ನಾನು ಎರಡು ಸಲ ಮೀಟ್ ಮಾಡಿದ್ದೇನೆ: ರಾಹುಲ್ ಗಾಂಧಿ

Rahul Gandhi

Krishnaveni K

ನವದೆಹಲಿ , ಶನಿವಾರ, 26 ಜುಲೈ 2025 (09:38 IST)

ನವದೆಹಲಿ: ನರೇಂದ್ರ ಮೋದಿ ರಾಜಕೀಯವಾಗಿ ದೊಡ್ಡ ಸಮಸ್ಯೆಯೇ ಅಲ್ಲ, ಅವರನ್ನು ನಾನು ಎರಡು ಸಲ ಭೇಟಿಯಾಗಿದ್ದೇನೆ. ಅವರದ್ದು ಎಲ್ಲಾ ಶೋ ಆಫ್ ಮಾತ್ರ, ಒಳಗೇನೂ ಇಲ್ಲ ಹೀಗಂತ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ನವದೆಹಲಿಯಲ್ಲಿ ನಡೆದ ಬಹುಜನ ನ್ಯಾಯ ಸಮ್ಮೇಳನದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಮೋದಿ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂದಿದ್ದಾರೆ. ಮಾತಿನ ನಡುವೆ ಸಭಿಕರಿಗೆ ‘ನಿಮಗೆ ಗೊತ್ತಾ ರಾಜಕೀಯದಲ್ಲಿ ಅತೀ ದೊಡ್ಡ ಸಮಸ್ಯೆ ಏನೆಂದು? ನರೇಂದ್ರ ಮೋದಿ ಅಲ್ಲ. ಅವರಿಗೆ ಅತಿಯಾದ ಪ್ರಾಮುಖ್ಯತೆ ನೀಡುತ್ತದ್ದಾರೆ ಅಷ್ಟೇ. ಈ ಮೊದಲು ನಾನು ಅವರನ್ನು ಭೇಟಿ ಮಾಡಿರಲಿಲ್ಲ. ಆದರೆ ಈಗ 2-3 ಸಲ ಭೇಟಿ ಮಾಡಿದ್ದೇನೆ. ಈಗ ನನಗೆ ಅರ್ಥವಾಗಿದೆ. ಅವರ ಒಳಗೆ ಏನೂ ಇಲ್ಲ, ಎಲ್ಲಾ ಶೋ ಆಫ್. ನೀವು ಅವರನ್ನು ಭೇಟಿ ಮಾಡಿರಲ್ಲ. ಆದರೆ ನಾನು ಭೇಟಿ ಮಾಡಿದ್ದೇನೆ’ ಎಂದಿದ್ದಾರೆ.

ನನ್ನ 21 ವರ್ಷಗಳ ರಾಜಕೀಯ ಜೀವನದಲ್ಲಿ ನಾನು ಮಾಡಿದ ದೊಡ್ಡ ತಪ್ಪೆಂದರೆ ಒಬಿಸಿ ಸಮುದಾಯದವರ ನಿಜ ಸಮಸ್ಯೆಗಳನ್ನು ಅರಿತಿರಲಿಲ್ಲ. ಹೀಗಾಗಿ ಈ ಸಮುದಾಯದವರ ಏಳಿಗೆಗೆ ಏನೂ ಮಾಡಿರಲಿಲ್ಲ. ಈಗ ನನಗೆ ಅವರ ಸಮಸ್ಯೆಯ ಆಳ ಅರಿವಾಗಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಮೋದಿ ಒಬಿಸಿ ಸಮುದಾಯದವರು ಎಂದು ಬಾಯಿ ಮಾತಿನಲ್ಲಿ ಹೇಳುತ್ತಾರೆ. ಆದರೆ ಅವರ ಏಳಿಗೆಗೆ ಏನನ್ನೂ ಮಾಡಲಿಲ್ಲ ಎಂದು ಟೀಕಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಶಿವನ ಹಾಡು ಹಾಡುವ ಈ ಮಗುವಿನ ವಿಡಿಯೋ ನೋಡಿದ್ರೆ ನಗು ಬರುತ್ತೆ