ಕೆಲವು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಹಾಡುವ ಕಲೆ ಒಲಿದಿರುತ್ತದೆ. ಇಂತಹದ್ದೇ ಮಗುವೊಂದು ಭಕ್ತಿಯಿಂದ ಶಿವನ ಹಾಡನ್ನು ಹಾಡುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಚಿಕ್ಕಮಕ್ಕಳಿಗೆ ಸ್ಟೇಜ್ ಫಿಯರ್ ಎನ್ನುವುದು ಇರುವುದಿಲ್ಲ. ತಮಗೆ ಗೊತ್ತಿರುವ ಹಾಡನ್ನು ತೋಚಿದ ಹಾಗೆ ಮುದ್ದಾಗಿ ಹಾಡುತ್ತಾರೆ. ಮಕ್ಕಳು ಹೇಗೇ ಹಾಡಿದರೂ ಚೆಂದವೇ. ಕುಮ್ಟಾದ ವಿಹಾನ್ ಎನ್ನುವ ಈ ಹುಡುಗ ಮಹಾಪ್ರಾಣ ದೀಪಂ ಹಾಡನ್ನು ನಿರರ್ಗಳವಾಗಿ ಹಾಡುತ್ತಾನೆ.
ಈ ಹಾಡು ಅತ್ಯಂತ ಕಷ್ಟದ ಹಾಡು. ಅವುಗಳ ಶಬ್ಧಗಳ ಉಚ್ಛಾರಣೆ ದೊಡ್ಡವರಿಗೇ ಕಷ್ಟ. ಹಾಗಿರುವಾಗ ಈ ಮಗು ಭೀತಿಯೇ ಇಲ್ಲದೇ ಹಾಡುವುದನ್ನು ನೋಡಿದರೆ ಅಚ್ಚರಿಯಾಗುತ್ತದೆ. ಅದೂ ತನ್ನ ಮುಗ್ಧ ಸ್ವರದಲ್ಲಿ ಕೊನೆಯವರೆಗೂ ತಪ್ಪಿಲ್ಲದೇ ಹಾಡುತ್ತದೆ.
ಈ ಮಗು ಹಾಡುವ ಪರಿ ನೋಡುಗರ ಮುಖದಲ್ಲಿ ನಗು ಮೂಡಿಸುವುದು ಖಂಡಿತಾ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಮಗುವಿನ ಹಾಡಿಗೆ ಮೆಚ್ಚುಗೆ ವ್ಯಕ್ತವಾಗಿದೆ.