Viral Video: ದುರಾದೃಷ್ಟಕ್ಕೆ ನಾನು ಸಂಸದ ಎಂದ ರಾಹುಲ್ ಗಾಂಧಿ: ತಿದ್ದಿದ ಜೈರಾಮ್ ರಮೇಶ್

Krishnaveni K
ಗುರುವಾರ, 21 ಆಗಸ್ಟ್ 2025 (14:58 IST)
ನವದೆಹಲಿ: ರಾಹುಲ್ ಗಾಂಧಿ ಅನೇಕ ಬಾರಿ ಸಾರ್ವಜನಿಕವಾಗಿ ಮಾತನಾಡುವಾಗ ಸಾಕಷ್ಟು ಬಾರಿ ಎಡವಟ್ಟು ಮಾಡಿಕೊಂಡಿದ್ದಾರೆ. ಇದರಿಂದ ಅವರು ಟ್ರೋಲ್ ಗೊಳಗಾಗಿದ್ದು ಇದೆ. ಇದೀಗ ಪತ್ರಿಕಾಗೋಷ್ಠಿಯಲ್ಲೇ ದುರಾದೃಷ್ಟಕ್ಕೆ ನಾನು ಸಂಸದ ಎಂದು ಎಡವಟ್ಟು ಮಾಡಿದ್ದು ಇದನ್ನು ಪಕ್ಕದಲ್ಲೇ ಕೂತಿದ್ದ ಕಾಂಗ್ರೆಸ್ ವಕ್ತಾರ, ಹಿರಿಯ ನಾಯಕ ಜೈರಾಮ್ ರಮೇಶ್ ತಿದ್ದಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಲೋಕಸಭೆ ಕಲಾಪದ ಬಗ್ಗೆ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಈ ವೇಳೆ ‘ದುರದೃಷ್ಟಕ್ಕೆ ನಾನು ಸಂಸದ. ನನಗೆ ಮಾತನಾಡಲು ಅವಕಾಶ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ’ ಎಂದರು. ಅವರ ಈ ಮಾತು ಅಪಾರ್ಥಕ್ಕೆಡೆ ಮಾಡಿಕೊಟ್ಟಿದೆ.

ತಕ್ಷಣವೇ ಪಕ್ಕದಲ್ಲಿದ್ದ ಜೈರಾಮ್ ರಮೇಶ್ ರಾಹುಲ್ ರನ್ನು ಕರೆದು ತಿದ್ದಿದ್ದಾರೆ. ದುರದೃಷ್ಟಕ್ಕೆ ಸಂಸದ ಎಂದರೆ ತಪ್ಪಾಗುತ್ತದೆ ಹಾಗಲ್ಲ, ಹೀಗೆ ಮಾತನಾಡಿ ಎಂದು ಜೈರಾಮ್ ರಮೇಶ್ ತಿದ್ದಿದ್ದಾರೆ. ಈ ವೇಳೆ ತಕ್ಷಣವೇ ಸಾವರಿಸಿಕೊಂಡ ರಾಹುಲ್ ಸರಿ ಹೇಳ್ತೀನಿ ಎಂದರು.

ಬಳಿಕ ‘ನಿಮ್ಮ ದುರದೃಷ್ಟಕ್ಕೆ’ ಎಂದು ಕೇಂದ್ರವನ್ನು ಉದ್ದೇಶಿಸಿ ಶಬ್ಧ  ಬದಲಾಯಿಸಿಕೊಂಡರು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಟ್ರೋಲ್ ಗೊಳಗಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುಖ್ಯಮಂತ್ರಿಗಳೇ ನಿಮ್ಮ ಪಕ್ಷದ ಪ್ರಚಾರದ ಗೀಳಿಗೆ ಇನ್ನೆಷ್ಟು ದುರ್ಘಟನೆ ಬೇಕು

ಸ್ವೀಟ್ ಖರೀದಿಸಿದ ರಾಹುಲ್ ಗಾಂಧಿಗೆ ಶಾಕಿಂಗ್ ಬೇಡಿಕೆಯಿಟ್ಟ ಅಂಗಡಿ ಮಾಲೀಕ

ನಕ್ಸಲಿಸಂ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದಿಟ್ಟ ಉತ್ತರ

ಪತ್ನಿ ಕೃತಿಕಾ ರೆಡ್ಡಿ ಹತ್ಯೆ ಬಗ್ಗೆ ಕೊನೆಗೂ ಸ್ಪೋಟಕ ಸತ್ಯ ಬಾಯ್ಬಿಟ್ಟ ಡಾ ಮಹೇಂದ್ರ ರೆಡ್ಡಿ

ಓಲಾ ಕಂಪೆನಿ ಎಂಜಿನಿಯರ್ ಅನುಮಾನಸ್ಪದ ಸಾವು, 28ಪುಟಗಳ ಡೆತ್‌ನೋಟ್‌ನಲ್ಲಿತ್ತು ಶಾಕಿಂಗ್ ಸಂಗತಿ

ಮುಂದಿನ ಸುದ್ದಿ
Show comments