Select Your Language

Notifications

webdunia
webdunia
webdunia
webdunia

ಅಮಿತ್ ಶಾ ವಿರುದ್ಧ ಮಾನಹಾನಿ ಹೇಳಿಕೆ: ಜು.2ರೊಳಗೆ ರಾಹುಲ್‌ ಕೋರ್ಟ್‌ಗೆ ಹಾಜರಾಗುವಂತೆ ಆದೇಶ

ಅಮಿತ್ ಶಾ ವಿರುದ್ಧ ಮಾನಹಾನಿ ಹೇಳಿಕೆ: ಜು.2ರೊಳಗೆ ರಾಹುಲ್‌ ಕೋರ್ಟ್‌ಗೆ ಹಾಜರಾಗುವಂತೆ ಆದೇಶ

Sampriya

ಉತ್ತರಪ್ರದೇಶ , ಬುಧವಾರ, 26 ಜೂನ್ 2024 (17:59 IST)
Photo Courtesy X
ಉತ್ತರಪ್ರದೇಶ:  ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಮಾನಹಾಕಿಕಾರ  ಹೇಳಿಕೆಗೆ ಸಂಬಂಧಿಸಿದಂತೆ ಜುಲೈ 2ರ ಒಳಗೆ ಖುದ್ದಾಗಿ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿಗೆ ಆದೇಶ ನೀಡಿದೆ.

ಆರಂಭದಲ್ಲಿ ಜೂನ್ 18 ರಂದು ವಿಚಾರಣೆಗೆ ನಿಗದಿಯಾಗಿದ್ದ ಮಾನನಷ್ಟ ಮೊಕದ್ದಮೆಯನ್ನು ನ್ಯಾಯಾಧೀಶರ ರಜೆಯ ಕಾರಣ ಜೂನ್ 26 ಕ್ಕೆ ಮುಂದೂಡಲಾಯಿತು. ಜುಲೈ 2 ರಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ನ್ಯಾಯಾಲಯ ಬುಧವಾರ ಕಾಂಗ್ರೆಸ್ ನಾಯಕನಿಗೆ ಆದೇಶಿಸಿದೆ.

ನ್ಯಾಯಾಲಯದಲ್ಲಿ ಹಾಜರಿದ್ದ ರಾಹುಲ್‌ ಗಾಂಧಿ ಪರ ವಕೀಲ ಕಾಶಿ ಪ್ರಸಾದ್ ಶುಕ್ಲಾ ಹಾಗೂ ದೂರುದಾರರ ಪರ ವಕೀಲ ಸಂತೋಷ್ ಕುಮಾರ್ ಅವರ ವಾದ– ಪತ್ರಿವಾದವನ್ನು ಆಲಿಸಿದ ಬಳಿಕ ನ್ಯಾಯಾಲಯವು ಈ ಆದೇಶವನ್ನು ಪ್ರಕಟಿಸಿತು.

2018ರ ಮೇ 8ರಂದು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ವಿರುದ್ದ ರಾಹುಲ್‌ ಗಾಂಧಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು. ಈ ಬಗ್ಗೆ ವಿಜಯ್‌ ಮಿಶ್ರಾ ಎಂಬುವವರು 2018ರ ಆಗಸ್ಟ್‌ 4ರಂದು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ವಿಪಕ್ಷ ನಾಯಕನಾಗಿ ಮೊದಲ ದಿನವೇ ಮೋದಿ ಏಟಿಗೆ ರಾಹುಲ್ ಗಾಂಧಿ ಎದಿರೇಟು