Select Your Language

Notifications

webdunia
webdunia
webdunia
webdunia

ರಾಹುಲ್‌ ಗಾಂಧಿಗೆ ದೊಡ್ಡ ಜವಾಬ್ದಾರಿ ವಹಿಸಲು ಮುಂದಾದ ಕಾಂಗ್ರೆಸ್‌

RahulGandhi

sampriya

ನವದೆಹಲಿ , ಗುರುವಾರ, 6 ಜೂನ್ 2024 (15:38 IST)
Photo By X
ನವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಒಂದೆಡೆ ಸರ್ಕಾರ ರಚಿಸಲು ಕಸರತ್ತು ನಡೆಸುತ್ತಿದ್ದರೆ, ಇತ್ತ ಕಾಂಗ್ರೆಸ್‍ನಲ್ಲಿ ವಿಪಕ್ಷ ಸ್ಥಾನವನ್ನು ಯಾರು ಅಲಂಕರಿಸಬಹುದು ಎಂಬುದರ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ.

ಸದ್ಯದ ರಾಜಕೀಯ ವಲಯದಲ್ಲಿರುವ ಚರ್ಚೆ ಪ್ರಕಾರ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಈ ಹೊಣೆ ನೀಡಲು ಪಕ್ಷದಲ್ಲಿ ತೀರ್ಮಾನಿಸಲಾಗಿದೆ ಎಂಬ ಮಾಹಿತಿಯಿದೆ. ಕಾಂಗ್ರೆಸ್‌ ಪಕ್ಷ ಈ ಮೂಲಕ ರಾಹುಲ್‌ ಗಾಂಧಿಗೆ ದೊಡ್ಡ ಜವಾಬ್ದಾರಿಯನ್ನು ನೀಡಲು ಮುಂದಾಗಿದೆ.  ಇನ್ನೂ ಈ ಹುದ್ದೆಯ ಮೇಲೆ ಶಶಿತರೂರ್, ಗೌರವ್ ಗೊಗೋಯ್ ಅವರಿಗೂ ನಿರೀಕ್ಷೆಯಿದೆ ಎಂಬ ಮಾತಿದೆ.

ಇನ್ನೂ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅತ್ಯುತ್ತಮ ಪ್ರದರ್ಶನದಲ್ಲಿ ರಾಹುಲ್‌ ಗಾಂಧಿ ಅವರ ಪಾತ್ರ ಬಹುಮುಖ್ಯವಾಗಿದೆ ಎಂದು ಹೇಳಲಾಗಿದೆ. ಆದ್ದರಿಂದ ಈ ಜಬಾವದಾರಿಯನ್ನು ಅವರಿಗೆ ನೀಡುವ ಬಗ್ಗೆ ಪಕ್ಷ ತೀರ್ಮಾನಿಸಿದೆ.

ಈ ಕುರಿತು ನಿನ್ನೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೃತೃತ್ವದಲ್ಲಿ ನಡೆದ ಇಂಡಿಯಾ ಒಕ್ಕೂಟ ಸಭೆಯಲ್ಲಿಯೂ ಚರ್ಚೆ ನಡೆಸಲಾಗಿದೆ ಎಂಬ ಮಾಹಿತಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಗರೇಟು ಬಿಟ್ಟ ದಿನ ನೆನೆದ ಸಿದ್ದರಾಮಯ್ಯ: ಆರೋಗ್ಯದ ಗುಟ್ಟು ಬಿಚ್ಚಿಟ್ಟ ಸಿಎಂ